ಭಾರತ-ಲಂಕಾ ಬಾಂಧವ್ಯ ಮತ್ತಷ್ಟು ಸದೃಢವಾಗಲಿದೆ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ, ಮೇ 11-ದ್ವೀಪರಾಷ್ಟ್ರ ಶ್ರೀಲಂಕಾಗೆ ತಮ್ಮ ಭೇಟಿ ಉಭಯ ದೇಶಗಳ ನಡುವೆ ಸದೃಢ ಸಂಬಂಧದ ಸಂಕೇತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಭೇಟಿಯಿಂದಾಗಿ ಬೌದ್ಧ ಧರ್ಮದ ಸಂಸ್ಕøತಿ ಮತ್ತು ಪರಂಪರೆ ವಿನಿಮಯಕ್ಕೂ ಸಹಕಾರಿಯಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ.
ಶ್ರೀಲಂಕಾಕ್ಕೆ ತಮ್ಮ ಎರಡು ದಿನಗಳ ಭೇಟಿ ವೇಳೆ ತಾವು ಬೌದ್ಧರ ಅತಿ ದೊಡ್ಡ ಉತ್ಸವವಾದ ಅಂತಾರಾಷ್ಟ್ರೀಯ ವೆಸಾಕ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದಾಗಿ, ಭಾರತದ ನೆರವಿನೊಂದಿಗೆ ನಿರ್ಮಾಣವಾಗಿರುವ ಆಸ್ಪತ್ರೆಯೊಂದನ್ನು ಉದ್ಘಾಟಿಸುವುದಾಗಿ ಹಾಗೂ ಭಾರತೀಯ ಮೂಲಕ ತಮಿಳು ಸಮುದಾಯವನ್ನು ಉದ್ದೇಶಿಸಿ ಮಾತನಾಡುವುದಾಗಿ ಮೋದಿ ತಿಳಸಿದ್ದಾರೆ.ಎರಡು ವರ್ಷಗಳಲ್ಲಿ ಇದು ತಮ್ಮ ಎರಡನೇ ದ್ವಿಪಕ್ಷೀಯ ಭೇಟಿಯಾಗಿದ್ದು, ಇದೊಂದು ಸದೃಢ ಸಂಬಂಧದ ದ್ಯೋತಕವಾಗಿದೆ ಎಂದು ಅವರು ಶ್ರೀಲಂಕಾ ಭೇಟಿಗೂ ಕೆಲವು ಗಂಟೆಗಳ ಮುನ್ನ ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin