ಭಾರತ ಹಾಗೂ ಬಾಂಗ್ಲಾ ದೇಶ ವಿರುದ್ಧದ ಸರಣಿಗೆ ಬಿಸಿಸಿಐ ಗ್ರೀನ್ ಸಿಗ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

Bnagladesh

ನವದೆಹಲಿ, ಜ.16- ಭಾರತ ಹಾಗೂ ಬಾಂಗ್ಲಾ ದೇಶ ವಿರುದ್ಧದ ಸರಣಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದ್ದು ಫೆಬ್ರವರಿ 9 ರಂದು ಹೈದರಾಬಾದ್‍ನ ರಾಜೀವ್‍ಗಾಂ ಕ್ರಿಕೆಟ್ ಆಂಗಳದಲ್ಲಿ ಏಕಮೇವ ಟೆಸ್ಟ್ ಪಂದ್ಯ ಜರುಗಲಿದೆ.  ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾ ದೇಶ ತಂಡಗಳು ಸರಣಿ ಆಡುತ್ತಿದ್ದು ಆ ಸರಣಿಗಳ ನಂತರ ಬಾಂಗ್ಲಾ ತಂಡವು ಭಾರತಕ್ಕೆ ಆಗಮಿಸಲಿದೆ.  ಈ ವೇಳೆ ಬಾಂಗ್ಲಾ ತಂಡವು ಭಾರತ ಎ ವಿರುದ್ಧ ಫೆಬ್ರವರಿ 1 ರಂದು 3 ದಿನಗಳ ಅಭ್ಯಾಸ ಪಂದ್ಯವನ್ನು ಹೈದರಾಬಾದ್‍ನಲ್ಲಿ ಆಡಲಿದೆ.   ಈ ಹಿಂದೆ ಫೆಬ್ರವರಿ 8 ರಂದು ಬಾಂಗ್ಲಾ ಹಾಗೂ ಭಾರತ ತಂಡ ವಿರುದ್ಧದ ಟೆಸ್ಟ್ ಪಂದ್ಯ ಆರಂಭವಾಗಬೇಕಾಗಿತ್ತಾದರೂ ಈಗ ಫೆಬ್ರವರಿ 9 ರಂದು ಈ ಪಂದ್ಯ ಜರುಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.  ಈ ಹಿಂದೆ ಬಾಂಗ್ಲಾ ದೇಶ ತಂಡವು 1990, 1998, 2006 ಹಾಗೂ 2016 ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರೂ ಕೂಡ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ.  ಅದರಂತೆ ಭಾರತ ತಂಡವು ಕೂಡ 2004, 2007, 2010 ಹಾಗೂ 2015ರಲ್ಲಿ ಬಾಂಗ್ಲಾ ಪ್ರವಾಸವನ್ನು ಕೈಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin