ಭಾರಿ ಮಳೆಯ ಜಲದೊಳಗೆ ಸೃಷ್ಟಿಯಾದ ಸುಂದರ ರಮ್ಯ ತಾಣ..!

ಈ ಸುದ್ದಿಯನ್ನು ಶೇರ್ ಮಾಡಿ

ds-3
ಭೂ ಮೇಲ್ಮೈಅನ್ನು ಹಠಾತ್ ಪರಿವರ್ತಿಸುವ ಅಗಾಧ ಶಕ್ತಿ ಪ್ರಕೃತಿಗೆ ಇದೆ. ದಕ್ಷಿಣ ಬ್ರೆಜಿಲ್‍ನಲ್ಲಿ ಘಟಿಸಿದ ಅಂಥ ವಿದ್ಯಮಾನವೊಂದು ನಿಸರ್ಗದ ವಿಸ್ಮಯಕ್ಕೆ ಸಾಕ್ಷಿಯಾಯಿತು. ರಮ್ಯ ಉದ್ಯಾನವನವೊಂದು ಭಾರೀ ಮಳೆಯಿಂದ ಮುಳುಗಿ ಸುಂದರ ಅಂತರ್ಜಲ ತಾಣವಾಗಿ ಪರಿವರ್ತನೆಯಾಯಿತು.  ದಕ್ಷಿಣ ಬ್ರೆಜಿಲ್‍ನ ಜಾರ್ಡಿಮ್‍ನಲ್ಲಿರುವ ರೆಕಾಂಟೋ ಎಕೋಲಾಜಿಕೋ ರಿಯಾ ಡಿಪ್ರಾಟಾ ಜೈವಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಅಲ್ಲಿನ ಸುಂದರ ಉದ್ಯಾನಗಳು, ಕಾಲು ದಾರಿಗಳು, ಮರದ ಸೇತುವೆಗಳು ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತದೆ.

ds-

ಆದರೆ ಇತ್ತೀಚೆಗೆ ಆ ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ತತ್ಪರಿಣಾಮವಾಗಿ ಓಲ್ಹೋ ಡಿಅಗುವಾ ನದಿ ಪ್ರವಾಹದಿಂದ ಭೋರ್ಗರೆದು ಈ ತಾಣವನ್ನು ಜಲಾವೃತಗೊಳಿಸಿತು. 10 ಅಡಿಗಳಷ್ಟು ನೀರು ಈ ರಮ್ಯ ತಾಣವನ್ನು ಮುಳುಗಿಸಿತು. ಆದರೆ ಸ್ಫಟಿಕ ಸ್ವಚ್ಚ ನೀರಿನಿಂದ ಆವೃತವಾದ ಈ ಉದ್ಯಾನವನವು ಸಾಗರಗರ್ಭದ ನಯನ ಮನೋಹರ ದೃಶ್ಯವನ್ನು ನೆನೆಪಿಸಿತು. ಅನೇಕ ಮಂದಿ ಈ ಜಲಗರ್ಭಕ್ಕೆ ಇಳಿದು ಸ್ವಾಭಾವಿಕ ನಿಸರ್ಗ ಸೌಂದರ್ಯ ಸವಿದರು. ಇದೊಂದು ತೀರಾ ಅಪರೂಪದ ವಿದ್ಯಮಾನ. 150 ಮಿಲಿಮೀಟರ್‍ಗಳಿಗಿಂತ ಹೆಚ್ಚಿನ ಮಳೆಯಾದರೆ ಇಂಥ ದೃಶ್ಯ ಕಂಡುಬರುತ್ತದೆ. ಐದು ವರ್ಷಗಳ ಹಿಂದೆಯೂ ಇದೇ ರೀತಿಯಾಗಿತ್ತು. ಸಾಮಾನ್ಯವಾಗಿ ಏಳು ವರ್ಷಕ್ಕೊಮ್ಮೆ ಇಂಥ ವಿಸ್ಮಯ ಗೋಚರಿಸುತ್ತದೆ ಎಂದು ಜೈವಿಕ ಪ್ರವಾಸೋದ್ಯಮ ತಾಣದ ಜನರಲ್ ಮ್ಯಾನೇಜರ್ ಲೂಯಿಸ್ ಕೊಯಿಲೋ ಬಣ್ಣಿಸಿದ್ದಾರೆ.  ಇಂಥ ಚೇತೋಹಾರಿ ದೃಶ್ಯ ಕಂಡುಬರುವುದು ಕೆಲವೇ ದಿನಗಳು ಮಾತ್ರ. ನೀರಿನ ಮಟ್ಟ ಕಡಿಮೆಯಾಗುತ್ತಿದಂತೆ ಈ ತಾಣ ಯಥಾಸ್ಥಿತಿಗೆ ಮರುಳುತ್ತದೆ. ಆದರೆ ಇದರಿಂದ ಯಾವುದೇ ಹಾನಿಯಾಗದಿರುವುದೂ ಕೂಡ ಪ್ರಕೃತಿ ವಿಸ್ಮಯ..!

ds-2

Facebook Comments

Sri Raghav

Admin