ಭಾರೀ ಗಾತ್ರದ ಮೊಸಳೆ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Crocodile

ದಾವಣಗೆರೆ, ಮಾ.21- ಜಿಲ್ಲೆಯ ಹರಿಹರ ತಾಲೂಕಿನ ಜಲಾಶಯದ ಹಿನ್ನೀರಿನಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹರಿಹರ ತಾಲೂಕಿನ ಸಂಪ್ಲಿಪುರ ಗ್ರಾಮದ ಬಳಿ ದೇವರ ಬೆಳಕೆರೆ ಡ್ಯಾಮ್‍ನ ಹಿನ್ನೀರಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಜಾನುವಾರುಗಳಿಗೆ ನೀರು ಕುಡಿಸಲು ಹೋದ ಹುಡುಗರು ಮೊಸಳೆ ಕಂಡು ಹೆದರಿ ಊರಿನಲ್ಲಿ ವಿಷಯ ತಿಳಿಸಿದ್ದಾರೆ. ಮುಖಂಡರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದು, ಮೊಸಳೆ ಹಿಡಿಯಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದರಿಂದಾಗಿ ಜಾನುವಾರುಗಳು ನೀರು ಕುಡಿಯಲು ಹಿನ್ನೀರಿನಲ್ಲಿ ಬಿಡಲು ರೈತರು ಹೆದರುತ್ತಿದ್ದಾರೆ. ಇತರೆ ಕೆಲಸಗಳಿಗೂ ನೀರು ತೆಗೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ.

Facebook Comments

Sri Raghav

Admin