ಭಾರೀ ಬೆಂಕಿಗೆ ಸೇನಾ ಶಿಬಿರದ ಕಚೇರಿ ಮತ್ತು 46 ಅಂಗಡಿಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Jammu-Fire--01

ಭದೆರ್‍ವಾ (ಜಮ್ಮು), ಏ.20-ಭಾರೀ ಬೆಂಕಿ ದುರಂತದಲ್ಲಿ ಸಶಸ್ತ್ರ ಸೀಮಾ ಬಲ್(ಎಸ್‍ಎಸ್‍ಬಿ) ಸೇನಾ ಶಿಬಿರ ಕಚೇರಿ ಮತ್ತು 46 ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ. ಅಗ್ನಿಯ ಕೆನ್ನಾಲಗೆಗೆ ಭಲಿಸಾ ಪ್ರದೇಶದ ಭಟ್ಯಾಸ್ ಮುಖ್ಯ ಮಾರುಕಟ್ಟೆ ಸುಟ್ಟ ಕರಕಲಾಗಿದೆ. ಅದೃಷ್ಟವಶಾತ್ ಈ ಆಕಸ್ಮಿಕದಲ್ಲಿ ಅದೃಷ್ಟವಶಾತ್ ಸಾವು-ನೋವು ಸಂಭವಿಸದಿದ್ದರೂ, ಲಕ್ಷಾಂತರ ರೂ.ಗಳ ಆಸ್ತಿ-ಪಾಸ್ತಿ ಬೂದಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.ನಿನ್ನೆ ಮಧ್ಯ ರಾತ್ರಿ ಸುಮಾರು 12 ಗಂಟೆಗೆ ಭಟ್ಯಾಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಪ್ರದೇಶವನ್ನು ಆವರಿಸಿತು. ಸುದ್ದಿ ತಿಳಿದ ಕೂಡಲೇ ತಾಥ್ರಿ ಮತ್ತು ಗಂಡೋಹ್ ಠಾಣೆಗಲಿಂದ ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಅಗ್ನಿಯ ರೌದ್ರಾವತಾರಕ್ಕೆ ಶಸ್ತ್ರ ಸೀಮಾ ಬಲ್ ಸೇನಾ ಶಿಬಿರ ಕಚೇರಿ ಮತ್ತು 46 ಅಂಗಡಿಗಳು ಆಹುತಿಯಾಗಿವೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin