ಭಾರೀ ಭ್ರಷ್ಟಾಚಾರ : ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ವಿಚಾರಣೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

South--01

ಸಿಯೋಲ್, ಮೇ 23- ಭಾರೀ ಭ್ರಷ್ಟಾಚಾರ ಮತ್ತು ಸರ್ಕಾರಿ ರಹಸ್ಯಗಳ ಸೋರಿಕೆ ಆರೋಪ ಎದುರಿಸುತ್ತಿರುವ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೆ ಪಾರ್ಕ್ ಜ್ಯೂ-ಹೇ ಅವರ ಮೇಲಿನ ಗಂಭೀರ ಆಪಾದನೆಗಳ ವಿಚಾರಣೆ ನ್ಯಾಯಾಲಯವೊಂದರಲ್ಲಿ ಆರಂಭವಾಗಿದೆ. ಆರೋಪಗಳು ಸಾಬೀತಾದಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾಗುವ ದೇಶದ ಪ್ರಥಮ ಮಹಿಳಾ ನಾಯಕಿ ಎಂಬ ಕುಖ್ಯಾತಿಗೂ ಪಾರ್ಕ್ ಪಾತ್ರವಾಗಲಿದ್ದಾರೆ.   ಕೋರ್ಟ್‍ಗೆ ಇಂದು ವಿಚಾರಣೆಗೆ ಹಾಜರಾದ ದೇಶದ ಮಾಜಿ ಅಧ್ಯಕ್ಷೆಯ ಕೈಗಳಿಗೆ ಕೋಳ ತೋಡಿಸಲಾಗಿತ್ತು. ಅವಮಾನದಿಂದ ತಲೆತಗ್ಗಿಸಿಕೊಂಡು ನಡೆಯುತ್ತಿದ್ದ ಅವರ ಸುತ್ತ ಪೊಲೀಸರು ಸುತ್ತುವರಿದಿದ್ದರು. ಸುಪ್ರೀಂಕೋರ್ಟ್‍ನಿಂದ ವಾಗ್ದಂಡನೆಗೆ ಗುರಿಯಾಗಿ ಪದಚ್ಯುತಗೊಂಡು ಮಾರ್ಚ್ 31ರಂದು ಜೈಲು ಶಿಕ್ಷೆಗೆ ಗುರಿಯಾದ ನಂತರ ಪಾರ್ಕ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.ಜೈಲಿನ ವಾಹನದಿಂದ ಕೋರ್ಟ್ ಆವರಣಕ್ಕೆ ಪಾರ್ಕ್ ಬರುತ್ತಿದ್ದಂತೆ ನೂರಾರು ಕ್ಯಾಮೆರಾಗಳ ಫ್ಲಾಶ್‍ಲೈಟ್‍ಗಳು ಒಮ್ಮೆಲೆ ಮಿನುಗಿದವು. 503ನೇ ನಂಬರಿನ ಕೈದಿಯಾಗಿರುವ ಅವರು ಕಡು ವರ್ಣ ಜಾಕೆಟ್ ಧರಿಸಿ ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ ಕೋರ್ಟ್ ರೂಂ ಪ್ರವೇಶಿಸಿದರು.   ವಿಚಾರಣೆ ಆರಂಭಿಸಿದ ನ್ಯಾಯಾಧೀಶ ಕಿಮ್ ಸೆ-ಯೂನ್, ನಿಮ್ಮ ವೃತ್ತಿ ಏನು ಎಂದು ಪ್ರಶ್ನಿಸಿದರು. ನಾನು ಈಗ ಯಾವುದೇ ವೃತ್ತಿ ಮಾಡುತ್ತಿಲ್ಲ ಎಂದು ಮಾತು ಆರಂಭಿಸಿದ ಅವರು ತಾವು ಯಾವುದೇ ಭ್ರಷ್ಟಾಚಾರ ಹಗರಣಗಳಲ್ಲಿ ಶಾಮೀಲಾಗಿಲ್ಲ ಹಾಗೂ ಸರ್ಕಾರಿ ರಹಸ್ಯಗಳನ್ನು ಸೋರಿಕೆ ಮಾಡಿಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin