ಭಾವೈಕ್ಯತೆಯ ಪ್ರತೀಕವಾದ ಗಂಗಾನದಿ ನೀರು ಕುಡಿಯಲು -ಸ್ನಾನಕ್ಕೂ ಯೋಗ್ಯವಲ್ಲವಂತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Ganga-River
ನವದೆಹಲಿ,ಮೇ 18- ಶತಕೋಟಿ ಭಾರತೀಯರ ನಂಬಿಕೆ ಮತ್ತು ಭಾವೈಕ್ಯತೆಯ ಪ್ರತೀಕವಾದ ಗಂಗಾನದಿ ನೀರು ಕುಡಿಯುವುದಕ್ಕಿರಲಿ, ಸ್ನಾನ ಮಾಡಲು ಕೂಡ ಯೋಗ್ಯವಲ್ಲ.   ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಇದನ್ನು ಖಚಿತಪಡಿಸಿದೆ.
ಗಂಗಾನದಿಯ ನೀರನ್ನು ಕುಡಿಯುವುದಕ್ಕಿರಲಿ ಸ್ನಾನ ಮಾಡಲು ಕೂಡ ಯೋಗ್ಯವಾಗಿಲ್ಲ. ನೀರಿನಲ್ಲಿ ಸಾಕಷ್ಟು ರಾಸಾಯನಿಕ ವಸ್ತುಗಳು ಮಿಶ್ರಣವಾಗಿ ಕಲುಷಿತವಾಗಿದೆ ಎಂದು ಹೇಳಿದೆ.   ಗಂಗಾನದಿಯ ಮೂಲಸ್ಥಳವಾದ ಉತ್ತರಖಂಡ್‍ನ ಗಂಗೋತ್ರಿಯಿಂದ ಹರಿದ್ವಾರದವರೆಗೆ ಒಟ್ಟು 19 ಸ್ಥಳಗಳಲ್ಲಿ ನೀರನ್ನು ಸಂಗ್ರಹಿಸಿದ್ದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆ ನಡೆಸಿತ್ತು.   ಹರಿದ್ವಾರದ 20 ಘಾಟ್‍ಗಳಲ್ಲಿ ಗಂಗಾನದಿ ಹರಿಯುತ್ತಿದ್ದು , ಪ್ರತಿದಿನ ಇಲ್ಲಿ 50 ಸಾವಿರದಿಂದ ಒಂದು ಲಕ್ಷದ ಭಕ್ತರು ಸ್ನಾನ ಮಾಡಿ ಹರಕೆ ತೀರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೆಲವರಿಗೆ ಮೈ ಮೇಲೆ ಗಂದೆಗಳು ಬಂದಿದ್ದವು. ವೈದ್ಯರ ಬಳಿ ಚಿಕಿತ್ಸೆಗೆ ಒಳಪಟ್ಟಾಗ ನಿಜಾಂಶ ಪತ್ತೆಯಾಯಿತು.ಗಂಗಾನದಿಯ ಉಗಮ ಸ್ಥಾನದಲ್ಲಿ ನೀರು ಶುದ್ಧವಾಗೆಯೇ ಇರುತ್ತದೆ. ಗಂಗೋತ್ರಿಯಿಂದ ಹರಿದ್ವಾರದ ಬಳಿ ಹರಿದುಬರುವಾಗ ಮಧ್ಯೆ ಸುಟ್ಟ ಹೆಣಗಳನ್ನು ಎಸೆಯುವುದು, ಕಸಗಳನ್ನು ಹಾಕುವುದು, ಕೈಗಾರಿಕೆಗಳ ತ್ಯಾಜ್ಯ, ರಾಸಾಯನಿಕ ವಸ್ತುಗಳ ಮಿಶ್ರಣ ಇತ್ಯಾದಿ ಕಾರಣಗಳಿಂದ ನೀರು ಕಲುಷಿತಗೊಳ್ಳುತ್ತದೆ.
ಜನರು ಇದರ ಬಗ್ಗೆ ತಿಳಿಯದೆ ಮುಗ್ಧರಾಗಿ ಸ್ನಾನ ಮಾಡುತ್ತಾರೆ. ಹೀಗಾಗಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಮಂಡಳಿ ತಿಳಿಸಿದೆ.
ಒಟ್ಟು 296 ಕಿ.ಮೀ ಹರಿಯುವ ಗಂಗಾನದಿಯಿಂದ ನಾವು 20 ಕಡೆ ನೀರು ಸಂಗ್ರಹಿಸಿದ್ದೆವು. ಇದನ್ನು ಪ್ರಯೋಗಾಲಯಕ್ಕೂ ಕಳುಹಿಸಿಕೊಟ್ಟೆವು. ನೀರಿನಲ್ಲಿ ರಾಸಾಯನಿಕ ಅಂಶಗಳು ವ್ಯಾಪಕವಾಗಿ ಮಿಶ್ರಣವಾಗಿರುವುದು ದೃಢಪಟ್ಟಿತು.
ಒಂದು ಲೀಟರ್ ನೀರಿನಲ್ಲಿ ಮೂರು ಗ್ರಾಂ ರಾಸಾಯನಿಕ ವಸ್ತುಗಳು ಸೇರಿಕೊಂಡರೆ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗಂಗಾನದಿಯ ಒಂದು ಲೀಟರ್ ನೀರಿನಲ್ಲಿ 6.4 ಮಿಲಿ ಗ್ರಾಂನಿಂದ 7 ಮಿ.ಮೀವರೆಗೆ ರಾಸಾಯನಿಕ ವಸ್ತುಗಳು ಸೇರಿಕೊಂಡಿವೆ.  ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸದ್ಯಕ್ಕೆ ಗಂಗಾನದಿಯನ್ನು ಸ್ವಚ್ಛಗೊಳಿಸುವವರೆಗೂ ಕುಡಿಯುವುದು, ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ ಎಂದು ವರದಿ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin