ಭಾಸ್ಕರ್‍ಶೆಟ್ಟಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು

ಈ ಸುದ್ದಿಯನ್ನು ಶೇರ್ ಮಾಡಿ

Bhaskar-Shetty-New

ಬೆಂಗಳೂರು, ಆ.10- ಉಡುಪಿ ಹೊಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.   ಪ್ರಕರಣದ ಆರೋಪಿಯಾಗಿರುವ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನಿಸಿ  ನುಂಗಿದ್ದ ವಜ್ರದ ಹರಳುಳ್ಳ ಒಂದು ಉಂಗುರ ಹಾಗೂ ಎರಡು ಕಿವಿ ಓಲೆಗಳಲ್ಲಿ ಒಂದು ಉಂಗುರ ಹೊರತೆಗೆಯಲಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಈತ ಗುಣಮುಖನಾದ ನಂತರ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದು ಪೊಲೀಸರು ತನಿಖೆಯನ್ನು ತೀವ್ರಗೊಳಿಸಲಿದ್ದಾರೆ.  ಭಾಸ್ಕರ್ ಶೆಟ್ಟಿ ಕೊಲೆ ಮಾಡಿದ ಆತನ ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಅವರು ಮೃತ ದೇಹವನ್ನು ಹೋಮಕುಂಡದ ಪಕ್ಕದ ಜಾಗದಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅವಶೇಷಗಳನ್ನು ನಿರಂಜನ್‍ಭಟ್ ಮೂಲಕ ಸಾಗಿಸಲಾಗಿದೆ. ಭಾಸ್ಕರ್ ಶೆಟ್ಟಿ ನಾಪತ್ತೆ ಪ್ರಕರಣ ಉಡುಪಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲೆ ಇವರ ಕುಟುಂಬದವರ ಮೇಲೆ ಪೊಲೀಸರ ಅನುಮಾನ ದಟ್ಟವಾಗುತ್ತಿದ್ದಂತೆ ನಿರಂಜನ್‍ಶೆಟ್ಟಿ ನಾಪತ್ತೆಯಾಗಿ ಬೆಂಗಳೂರಿಗೆ ಬಂದಿದ್ದಾನೆ.   ಪ್ರಕರಣದಲ್ಲಿ ಈತನೂ ಆರೋಪಿ ಎಂದು ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಈತ ತನ್ನ ಕೈಲಿದ್ದ ಒಂದು ಉಂಗುರ ಹಾಗೂ ಎರಡು ಕಿವಿ ಓಲೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.  ಈತನನ್ನು ಉಡುಪಿ ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವು ಎಂದು ಹೇಳಿದಾಗ ಪೊಲೀಸರು ವೈದ್ಯರಿಂದ ತಪಾಸಣೆಗೊಳಪಡಿಸಿದ್ದಾರೆ. ಆಗ ಓಲೆ ಮತ್ತು ಉಂಗುರಗಳನ್ನು ನುಂಗಿರುವುದಾಗಿ ವೈದ್ಯರ ಮುಂದೆ ತಿಳಿಸಿದ್ದಾನೆ.

ಭಾಸ್ಕರ್‍ಶೆಟ್ಟಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸ್ಕ್ಯಾನಿಂಗ್ ಮಾಡಿದಾಗ ಈತನ ಹೊಟ್ಟೆಯಲ್ಲಿ ಉಂಗುರ ಮತ್ತು ಓಲೆಗಳು ಇರುವುದು ಕಂಡುಬಂದಿದೆ. ಅದರಲ್ಲಿ ಒಂದು ಉಂಗುರ ಹೊರಬಂದಿದೆ. ಇನ್ನೂ ಎರಡು ಓಲೆಗಳನ್ನು ಹೊರತೆಗೆಯಬೇಕಾಗಿದೆ. ಈತನಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಈತ ಗುಣಮುಖನಾದ ನಂತರ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin