ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ, ಎಸ್‍ಐ ಸೇರಿ ಮೂವರ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

bhaskar--shetty

ಉಡುಪಿ, ಆ.22- ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಈ ಅಮಾನತು ಆದೇಶ ಹೊರಡಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಾದ ಪತ್ನಿ , ಪುತ್ರ ಮತ್ತು ಪುರೋಹಿತ ಮೂವರನ್ನು ನ್ಯಾಯಾಲಯಕ್ಕೆ ವಿಚಾರಣೆಗಾಗಿ ಇನೋವಾ ಕಾರಿನಲ್ಲಿ ಕರೆತರಲಾಗಿತ್ತು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕೊಲೆ ಆರೋಪಿಗಳಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಕುರಿತಂತೆ ವಿಚಾರಣೆಗೆ ಆದೇಶಿಸಲಾಗಿತ್ತು. ವಿಚಾರಣೆ ವರದಿ ಪರಿಶೀಲಿಸಿದ ಉಡುಪಿ ಎಸ್‍ಪಿ ಸಂಜೀವ್ ಪಾಟೀಲ್ ಅವರು ಜಿಲ್ಲಾ ಡಿಎಆರ್ ಸಬ್‍ಇನ್ಸ್‍ಪೆಕ್ಟರ್ ಸುಧಾಕರ್, ಮಣಿಪಾಲ್ ಠಾಣೆ ಸಿಬ್ಬಂದಿ ರೇಣುಕ ಮತ್ತು ಸಲ್ಮಾನ್ ಅವರನ್ನು ಅಮಾನತು ಮಾಡಿ ಇಂದು ಆದೇಶ ಹೊರಡಿಸಿದರು.

Facebook Comments

Sri Raghav

Admin