ಭಿಕ್ಷೆ ಬೇಡಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದ..!

ಈ ಸುದ್ದಿಯನ್ನು ಶೇರ್ ಮಾಡಿ

Begg

ರಿಯೊ ಡಿ ಜನೈರೋ, ಆ.17-ಕ್ರೀಡಾಲೋಕದ ಮಹೋನ್ನತ ಸ್ಪರ್ಧಾ ವೇದಿಕೆ ಒಲಂಪಿಕ್ಸ್ನಲ್ಲಿ ಅರ್ಹತೆ ಪಡೆಯಲು ಅಭಿವೃದ್ಧಿಶೀಲ ದೇಶಗಳು ಲಕ್ಷಾಂತರ ರೂಪಾಯಿ ಸುರಿಯುತ್ತವೆ. ಭಿಕ್ಷೆ ಬೇಡಿ ಕೊನೆಗೂ ಭಾಗವಹಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಭಿಕ್ಷೆ ಬೇಡಿ ಕೊನೆಗೂ ಸ್ಪರ್ಧಿಸಲು ಸ್ಥಾನ ಪಡೆದ ಮೆಕ್ಸಿಕೋದ ಬಾಕ್ಸರ್ ಮಿಸಾಯಿಲ್ ರೊಡ್ರಿಗ್ಸ್ ಕನಿಷ್ಠ ಕಂಚು ಪದಕ ಗೆದ್ದೇ ಗೆಲ್ಲುವುದು ಖಚಿತವಾಗಿದೆ. ಬಡತನದ ಬೇಗೆಯಲ್ಲಿರುವ ರೊಡ್ರಿಗ್ಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮೆಕ್ಸಿಕೋ ನಗರದ ಬೀದಿಗಳು ಮತ್ತು ಬಸ್ಗಳಲ್ಲಿ ಭಿಕ್ಷೆ ಬೇಡಿ ಅವರಿವರನ್ನು ಕಾಡಿ ಬೇಡಿ, ಹೇಗೋ ಕಷ್ಟಪಟ್ಟು ಹಣ ಸಂಗ್ರಹಿಸಿ, ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದ ಸ್ಪರ್ಧಿಸಲು ಅರ್ಹತೆ ಪಡೆದ.

75 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕಟ್ಟು ಮಸ್ತಾದ ಈತ, ಈಜಿಪ್ಟ್ನ ಬಲಶಾಲಿ ಬಾಕ್ಸರ್ ಹೊಸಮ್ ಅಬ್ದಿನ್ರನ್ನು ಹೊಡೆದುರುಳಿಸಿ ಸೆಮಿಫೈನಲ್ ತಲುಪಿದ್ದಾನೆ. ಕೊನೆ ಪಕ್ಷ ಕಂಚು ಪದಕ ಕೊರಳಿಗೇರಿಸುವುದು ಬಹುತೇಕ ಖಚಿತವಾಗಿದೆ.  ತಾನು ಬಂಗಾರ ಗೆದ್ದು ತನಗೆ ಉದಾರ ಸಹಾಯ ಮಾಡಿದ ಜನರಿಗೆ ಋಣ ತೀರಿಸುವ ಕೃತಜ್ಞತಾ ಭಾವ ಹೊಂದಿದ್ದಾನೆ ರೊಡ್ರಿಗ್ಸ್.

► Follow us on –  Facebook / Twitter  / Google+

Facebook Comments

Sri Raghav

Admin