ಭಿನ್ನರ ಜತೆ ರಾಜೀ ಪ್ರಶ್ನೆಯೇ ಇಲ್ಲ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ರಾಮನಗರ, ಆ.17– ಪಕ್ಷದ ನಿರ್ಧಾರಕ್ಕೆ ಸೆಡ್ಡು ಹೊಡೆದು ಮೋಸ ಮಾಡಿರುವ ಎಂಟು ಶಾಸಕರನ್ನು ಪುನಃ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಇಂದಿಲ್ಲಿ ಪುನರುಚ್ಚರಿಸಿದ್ದಾರ. ರಾಜ್ಯಾಧ್ಯಕ್ಷನಾಗಿ ನಾನು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕೆಲವರು ಶ್ರೀಮಂತರಾಗಿ ಈಗ ಬಂಡಾಯ ಸಾರುತ್ತಿದ್ದಾರೆ. ಅವರು ನನ್ನನ್ನು ಏನಾದರೂ ಬೈದುಕೊಳ್ಳಲಿ ಪರವಾಗಿಲ್ಲ. ಅವರು ಚೆನ್ನಾಗಿರಲಿ. ಕಳೆದ 50 ವರ್ಷದಿಂದ ರಾಜ್ಯಕ್ಕೆ ಜೆಡಿಎಸ್ ಸಾಕಷ್ಟು ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆದು ರಾಜ್ಯದಲ್ಲಿ ಮತ್ತೆ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin