ಭೀಕರವಾಗಿ ಕೊಚ್ಚಿ ಒಂದೇ ಕುಟುಂಬದ ನಾಲ್ವರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

UP--01

ಬಾಂಡಾ(ಉ.ಪ್ರ.), ಜ.31-ಅಪರಿಚಿತ ಹಂತಕರು ಇಬ್ಬರು ಅಪ್ರಾಪ್ರರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶದ ಬಾಂಡಾ ನಗರದ ಹೊರವಲಯದ ಛೋಟೆ ಕಿ ಪುರ್ವ ಬಡಾವಣೆಯಲ್ಲಿ ನಡೆದಿದೆ. ಮಹಾವೀರ್(46), ಅವರ ಪತ್ನಿ ಚುನ್ನಿ(43) ಹಾಗೂ ಇಬ್ಬರು ಅಪ್ರಾಪ್ತ ಗಂಡು ಮಕ್ಕಳಾದ ರಾಜ್‍ಕುಮಾರ್ ಮತ್ತು ಪವನ್ ಕುಮಾರ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಡಿಜಿಪಿ ಜ್ಞಾನೇಶ್ವರ್ ತಿವಾರಿ ತಿಳಿಸಿದ್ದಾರೆ.  ದಂಪತಿಯ ಇನ್ನಿಬ್ಬರು ಮಕ್ಕಳಾದ ಆರು ವರ್ಷದ ಮಗಳು ಮತ್ತು ಮತ್ತೊಬ್ಬ ಪುತ್ರ ಮಹಾವೀರ್ ಪಕ್ಕದ ಮನೆಯಲ್ಲಿ ಮಲಗಿದ್ದ ಕಾರಣ ಪಾರಾಗಿದ್ದಾರೆ. ಹಳೆ ವೈಷಮ್ಯವೇ ಈ ಹತ್ಯಾಕಾಂಡಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Facebook Comments

Sri Raghav

Admin