ಭೀಕರ ಬರ : ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

farmers

ಅರಸೀಕೆರೆ, .10-ಭೀಕರ ಬರದಿಂದ ತಾಲೂಕಿನ ಜನ-ಜಾನುವಾರಗಳು ತತ್ತರಿಸಿ ಹೋಗಿದ್ದು ಕ್ರಮ ಕೈಗೊಳ್ಳಬೇಕಾದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೈಚೆಲ್ಲಿ ಕುಳಿತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಮಾಜಿ ಶಾಸಕ ಎ.ಎಸ್.ಬಸವರಾಜು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿವಿಟಿ ಬಸವರಾಜು ನೇತೃತ್ವದಲ್ಲಿ ನಗರದ ಪಿಪಿ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್.ರಸ್ತೆ ಮಾರ್ಗವಾಗಿ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಾಸ್ತಿದಾರ್ ಶಿವಶಂಕರ್‍ರವರಿಗೆ ಮನವಿಪತ್ರ ಸಲ್ಲಿಸಿದರು.ಮಾಜಿ ಶಾಸಕ ಎ.ಎಸ್.ಬಸವರಾಜು ಮಾತನಾಡಿ, ರಾಜ್ಯದ 160ತಾಲೂಕುಗಳನ್ನು ಬರಪೀಡಿತ ತಾಲೂಕ್ಕೆಂದು ಘೋಷಿಸಿರುವ ಸರಕಾರ ಆ ತಾಲೂಕುಗಳಲ್ಲಿ ಬರಪರಿಹಾರ ಕಾಮಗಾರಿಯನ್ನು ಕೈಗೊಳ್ಳದೇ ಕೈಚೆಲ್ಲಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿವಿಟಿ ಬಸವರಾಜು ಮಾತನಾಡಿ, ಬರಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರಕಾರ 1782 ಕೋಟಿ ರೂ. ಅನುದಾನ ನೀಡಿದೆ. ಆದರೆ ಈ ಅನುದಾನವನ್ನು ಬಳಸಿಕೊಳ್ಳುವಲ್ಲಿಯೂ ಸಹ ರಾಜ್ಯ ಸರಕಾರ ವಿಫಲವಾಗಿದೆ. ಇದು ರಾಜ್ಯ ಸರಕಾರದ ಕಾರ್ಯವೈಖರಿಯನ್ನು ಅಣುಕಿಸುವಂತಿದೆ ಎಂದು ದೂರಿದರು.
ರೈತ ಮುಖಂಡ ಬೋರನಕೊಪ್ಪಲು ಶಿವಲಿಂಗಪ್ಪ ಮಾತನಾಡಿ, ತಾಲೂಕಿನ ಆಯ್ದ ಭಾಗಗಳಲ್ಲಿ ಗೋಶಾಲೆಯನ್ನು ತೆರೆದಿದ್ದ ಜಿಲ್ಲಾಡಳಿತ ಏಕಾಏಕಿ ಈ ಗೋಶಾಲೆಗಳನ್ನು ಬಂದ್ ಮಾಡಿದೆ. ಬದಲಿಗೆ ಮೇವಿನ ಬ್ಯಾಂಕ್ ಮೂಲಕ ಜಾನುವಾರಗಳಿಗೆ ಮೇವು ವಿತರಿಸುತ್ತೇವೆ ಎಂದು ಹೇಳಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗ ಕೈಗೆ ಸೀಗುತ್ತಿಲ್ಲ ಎಂದು ಆರೋಪಿಸಿದರು.ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್, ತಾಪಂ ಮಾಜಿ ಸದಸ್ಯ ಪುಟ್ಟನಕಟ್ಟೆ ದಿನೇಶ್, ತಾಲೂಕು ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮನೋಜ್‍ಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾಸತೀಶ್, ತಾಲೂಕು ಯುವಮೋರ್ಚಾ ಕಾರ್ಯದರ್ಶಿ ವಿಜಯ್‍ಕುಮಾರ್, ಮುಖಂಡರಾದ ಚಿದಾನಂದ್, ಜಿಪಂ ಮಾಜಿ ಸದಸ್ಯ ಕೃಷ್ಣನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin