ಭೀಮಾನಾಯಕ್ ಪ್ರಕರಣ : ಜನಾರ್ಧನರೆಡ್ಡಿ- ಶ್ರೀರಾಮುಲುಗೆ ಸಿಐಡಿ ನೋಟಿಸ್..?

ಈ ಸುದ್ದಿಯನ್ನು ಶೇರ್ ಮಾಡಿ

Sriramulu-Janardhan-Reddy

ಬೆಂಗಳೂರು,ಡಿ.14- ಮಾಜಿ ಸಚಿವ ಜನಾರ್ಧನ ರೆಡ್ಡಿ ಮಗಳ ಮದುವೆಗಾಗಿ ಕಪ್ಪುಹಣವನ್ನು ಬಿಳಿ ಮಾಡಲು ಸಹಾಯ ಮಾಡಿದ ಭೀಮಾನಾಯಕ್ ಪ್ರಕರಣದಲ್ಲಿ ಸಂಸದ ಶ್ರೀರಾಮುಲು ಹಾಗೂ ಗಾಲಿ ಜನಾರ್ಧನರೆಡ್ಡಿಗೆ ಶೀಘ್ರದಲ್ಲೇ ಸಿಐಡಿ ನೋಟಿಸ್ ನೀಡುವ ಸಾಧ್ಯತೆ ಇದೆ.  ನಾನು ಮಾಡುತ್ತಿದದ್ದೇ ಬ್ಲಾಕ್ ಅಂಡ್ ವೈಟ್ ದಂಧೆ. ಅದಕ್ಕಾಗಿ ಹುಡುಗರನ್ನು ಬಳಸಿಕೊಳ್ಳುತ್ತಿದೆ. ಪ್ರಮುಖವಾಗಿ ಜನಾರ್ದನ ರೆಡ್ಡಿಯೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಸ್ವತಃ ಭೀಮಾನಾಯಕ್ ಹೇಳಿಕೆ ನೀಡಿರುವುದಾಗಿ ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಈ ಮಾಹಿತಿ ಪ್ರಕಾರ ಜಾರಿ ನಿರ್ದೇಶನಾಲಯ ಭೀಮಾನಾಯಕ್ ಪ್ರಕರಣಕ್ಕೆ ಅಧಿಕೃತ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ. ರಾಮನಗರದ ಐಜೂರು  ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣದ ವಿಚಾರಣೆ ಕೂಡ ನಡೆಯುತ್ತಿದ್ದು, ಇಬ್ಬರು ಪ್ರತಿಷ್ಠಿತ ಉದ್ಯಮಿಗಳ ಹೆಸರು ದಂಧೆಯಲ್ಲಿ ಕೇಳಿಬಂದಿದೆ. ಇಡೀ ಪ್ರಕರಣದ ಕಿಂಗ್‍ಪಿನ್‍ಗಳಾಗಿರುವ ಕೆಎಎಸ್ ಅಧಿಕಾರಿ ಭೀಮಾನಾಯಕ್ ಇನ್ನೂ ನಾಲ್ಕು ದಿನಗಳಲ್ಲಿ ಅದೆಷ್ಟು ಸತ್ಯ ಬಯಲು ಮಾಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

ಇಡಿ ವಶಕ್ಕೆ ಜಯಚಂದ್ರ?:

ಹಾಸಿಗೆ ಕೆಳಗೆ, ಹಾಸಿಗೆ ಮೇಲೆ ಕೋಟಿ ಕೋಟಿ ಹಣ ಬಚ್ಚಿಟ್ಟು ಸಿಕ್ಕಿಬಿದ್ದಿದ್ದ ಜಯಚಂದ್ರನ  ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಸದ್ಯ ಜಾರಿ ನಿರ್ದೇಶನಾಲಯ ಜಯಚಂದ್ರಗೆ ಸೇರಿದ ನಾಲ್ಕು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.  ಬೇನಾಮಿ ಆಸ್ತಿ ಮಾಡಿರುವುದರಲ್ಲಿ ನಿಸ್ಸೀಮಾರಾಗಿದ್ದ ಅವರ ಎಲ್ಲಾ ಆಸ್ತಿ ದಾಖಲೆಗಳನ್ನು ಕಂದಾಯ ಇಲಾಖೆ ಯಿಂದಲೂ ವಶಕ್ಕೆ ಪಡೆಯಲಾಗಿದೆ.  ಜಯಚಂದ್ರ ಪ್ರಕರಣದಲ್ಲಿ ಇಬ್ಬರು ಸಚಿವರ ಹೆಸರನ್ನು ಗಮನಿಸಿರುವ ಇಡಿ ಇಂದು ನ್ಯಾಯಾಧೀಶರ ಮುಂದೆ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡುವ ಸಾಧ್ಯತೆ ಇದೆ. ಚಕ್ರವರ್ತಿ, ಚಂದ್ರಕಾಂತ್ ಸಂಪರ್ಕ, ರಾಜ್ಯ ಸರ್ಕಾರದ ಸಚಿವರ ಸಂಪರ್ಕ ಎಲ್ಲವೂ ವಿಚಾರಣೆಯಲ್ಲಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಗಳಿವೆ.

ಚಂದ್ರಕಾಂತ್‍ಗೆ ಜೈಲಲ್ಲಿ ರಾಜಾತಿಥ್ಯ :

ಜಯಚಂದ್ರ ಜೊತೆ ಸಿಕ್ಕಿಬಿದ್ದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚಂದ್ರಕಾಂತ್ ರಾಮಲಿಂಗಂ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ದೊರೆಯುತ್ತಿದ್ದು, ಜನಾರ್ದನ ರೆಡ್ಡಿ ಬಂಧನದಲ್ಲಿದ್ದಾಗ ಸೆಲ್ ನಲ್ಲೇ ಚಂದ್ರಕಾಂತ್‍ಗೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಜೈಲಧಿಕಾರಿಗಳ ಸಹಾಯದಿಂದ ಮಲಗೋಕೆ ಹಾಸಿಗೆ, ತಿನ್ನಲು ಫೈವ್‍ಸ್ಟಾರ್ ಫುಡ್ ನೀಡಲಾಗುತ್ತಿದೆಯಂತೆ ಅಲ್ಲದೆ ಚಂದ್ರಕಾಂತ್‍ಗೆ ಸಾಥ್ ನೀಡಿದ್ದ ನಜೀರ್‍ಗೂ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin