ಭೀಮಾನಾಯ್ಕ್’ಗೆ ಜನವರಿ 4ರ ವರೆಗೆ ನ್ಯಾಯಾಂಗ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bheema-Naik

ಮಂಡ್ಯ, ಡಿ.23-ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾನಾಯ್ಕ್‍ಗೆ ಜನವರಿ 4 ರವರೆಗೆ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಕಾರು ಚಾಲಕ ಮಹಮ್ಮದ್ ಅವರಿಗೂ ಕೂಡ ನ್ಯಾಯಾಂಗ ಬಂಧನ ವಿಧಿಸಿದೆ. ಭೀಮಾನಾಯ್ಕ್ ಅವರ ಖಾಸಗಿ ಕಾರು ಚಾಲಕರಾಗಿದ್ದ ರಮೇಶ್‍ಗೌಡ ಇತ್ತೀಚೆಗೆ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಆತ್ಮಹತ್ಯೆಗೆ ಭೀಮಾನಾಯ್ಕ್ ಹಾಗೂ ಮಹಮ್ಮದ್ ಕಾರಣ ಅಲ್ಲದೆ ಭೀಮಾನಾಯ್ಕ್ ಅವರು ಅಪಾರ ಅಕ್ರಮ ಆಸ್ತಿ ಹೊಂದಿದ್ದರಲ್ಲದೆ, ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರ ಕಪ್ಪು ಹಣವನ್ನು ಬಿಳಿ ಮಾಡಲು ಸಹಕರಿಸಿದ್ದರು. ಇದೆಲ್ಲವನ್ನು ತಿಳಿದಿದ್ದ ನನಗೆ ಜೀವ ಬೆದರಿಕೆ ಹಾಕಿದ್ದರು ಎಂದು ತಿಳಿಸಿ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.   ಇಂದು ಸಿಐಡಿ ಅಧಿಕಾರಿಗಳು ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.
ವಿಚಾರಣೆ ನಡೆಸಿದ 2ನೆ ಅಪರ ಮುಖ್ಯ ನ್ಯಾಯಾಧೀಶರಾದ ಟಿ.ಎಂ.ಪ್ರಕಾಶ್ ಅವರು ಇಬ್ಬರು ಆರೋಪಿಗಳಿಗೆ ಜ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.  ನಂತರ ಪೊಲೀಸ್ ಬಂದೋಬಸ್ತ್‍ನಲ್ಲಿ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin