ಭೀಮಾನಾಯ್ಕ್ ಮತ್ತು ಕಾರು ಚಾಲಕ ಮಹಮದ್‍ 5 ದಿನ ಸಿಐಡಿ ಕಸ್ಟಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Bheema-Naik

ಮದ್ದೂರು, ಡಿ.13– ಕಾರು ಚಾಲಕ ರಮೇಶ್‍ಗೌಡ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ನೋಟು ಪರಿವರ್ತನೆ ಆರೋಪ ಕುರಿತಂತೆ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾನಾಯ್ಕ್ ಮತ್ತು ಇವರ ಖಾಸಗಿ ಕಾರಿನ ಚಾಲಕ ಮಹಮದ್‍ನನ್ನು ಇಲ್ಲಿನ ಜೆಎಂಎಫ್‍ಸಿ ಅಪರ ಸಿವಿಲ್ ನ್ಯಾಯಾಲಯ ಐದು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಲಾಗಿದೆ.
ಭಾನುವಾರ ಕಲಬುರ್ಗಿಯಲ್ಲಿ ಅವರನ್ನು ಬಂಧಿಸಿದ್ದ ಪೊಲೀಸರು ನಿನ್ನೆ ಬೆಳಗ್ಗೆ ಮದ್ದೂರಿಗೆ ಕರೆತಂದು ಸೋಮನಹಳ್ಳಿಯ ಅಜ್ಞಾತ ಸ್ಥಳದಲ್ಲಿಟ್ಟು ಸಿಐಡಿ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದರು.

ಸಂಜೆ 7.30ರ ಸುಮಾರಿನಲ್ಲಿ ಮದ್ದೂರು ಠಾಣೆಗೆ ಕರೆತರಲಾಯಿತು. ತದನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭೀಮಾನಾಯ್ಕ್ ಮತ್ತು ಕಾರು ಚಾಲಕ ಮಹಮದ್‍ನನ್ನು ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ನಿನ್ನೆ ರಾತ್ರಿ 8 ಗಂಟೆಯಲ್ಲಿ ಜೆಎಂಎಫ್‍ಸಿ ಅಪರ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಭೀಮಾನಾಯ್ಕ್ ಪರ ವಕೀಲರಾದ ಅಪ್ಪಾಜಿಗೌಡ, ಯೋಗಾನಂದ ಅವರು ಜಾಮೀನು ಅರ್ಜಿ ಸಲ್ಲಿಸಿದಾಗ ನ್ಯಾಯಾಧೀಶರು ಇವರ ಅರ್ಜಿಯನ್ನು ವಜಾ ಮಾಡಿದರು.

ಸಿಐಡಿ ಪೊಲೀಸರು ಭೀಮಾನಾಯ್ಕ್ ಮತ್ತು ಕಾರು ಚಾಲಕ ಮಹಮದ್‍ನನ್ನು 7 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೇಳಿಕೊಂಡಾಗ ಇದಕ್ಕೆ ಒಪ್ಪದ ನ್ಯಾಯಾಧೀಶರು 5 ದಿನ ಮಾತ್ರ ಕಸ್ಟಡಿಯಲ್ಲಿಟ್ಟುಕೊಳ್ಳಲು ಸೂಚಿಸಿದರು. ತದನಂತರ ಭೀಮಾನಾಯ್ಕ್ ಮತ್ತು ಮಹಮದ್‍ನನ್ನು ಸಿಐಡಿ ಪೊಲೀಸರು ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೆದೊಯ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin