ಭೂಕಂಪನ : ಮನೆಗಳಿಗೆ ಹಾನಿ, ಗ್ರಾಮಸ್ಥರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

malavali

ಮಳವಳ್ಳಿ, ಫೆ.7- ತಾಲ್ಲೂಕಿನ ಪೂರಿಗಾಲಿ ಸಮೀಪದ ಚಿಕ್ಕಬಾಗಿಲು ಗ್ರಾಮದಲ್ಲಿ ಭೂಮಿ ಕಂಪನದಿಂದಾಗಿ ಮೂರ್ನಾಲ್ಕು ಮನೆ ಹಾಗೂ ರಸ್ತೆ ಬಿರುಕು ಬಿಟ್ಟಿದ್ದು ಭಾರೀ ಆತಂಕ ಸೃಷ್ಟಿಸಿತ್ತು.ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದ ಅನುಭವವಾಗಿ ನಿದ್ರೆಯಲ್ಲಿದ್ದ ಜನ ಆತಂಕದಿಂದ ಮನೆಯಿಂದ ಹೊರ ಓಡಿ ಬಂದಿದ್ದರು. ಕೆಲವರು ಆತಂಕದಿಂದಲೇ ರಾತ್ರಿಯಿಡೀ ಮನೆಯಿಂದ ಹೊರ ಭಾಗದಲ್ಲೇ ರಾತ್ರಿ ಕಳೆದಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ಭೂಮಿ ಕಂಪಿಸಿದ ಅನುಭವವಾಗಿದ್ದು , ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಭೂಮಿ ತೀವ್ರ ಪ್ರಮಾಣದಲ್ಲಿ ಕಂಪಿಸಿದ ಪರಿಣಾಮವಾಗಿ ಗ್ರಾಮದ 3-4 ಮನೆಗಳು ಬಿರುಕು ಬಿಟ್ಟಿವೆ. ಅದರಲ್ಲೂ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಮಹದೇವ ಸ್ವಾಮಿ ಅವರಿಗೆ ಸೇರಿದ ಎರಡು ಮನೆಗಳ ಗೋಡೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.  ಇದಲ್ಲದೆ ಗ್ರಾಮದಿಂದ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ಮಣ್ಣು ರಸ್ತೆಯ ಮಧ್ಯದಲ್ಲೇ ಭಾರೀ ಬಿರುಕು ಕಾಣಿಸಿಕೊಂಡಿರುವುದು ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿದ್ದು, ರಸ್ತೆಯ ಮಧ್ಯದ ಈ ಬಿರುಕು ಗ್ರಾಮದಲ್ಲಿ ಭಯದ ವಾತಾವರಣನ್ನು ಇನ್ನಷ್ಟು ಹೆಚ್ಚಿಸಿದೆ. ಸುದ್ದಿ ತಿಳಿದ ಕೂಡಲೇ ಭೂವಿಜ್ಞಾನಿಗಳು  ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಗ್ರಾಮದ ಕೂಗಳತೆ ದೂರದಲ್ಲಿರುವ ಕಾವೇರಿ ನದಿ ತಪ್ಪಲಿನಲ್ಲಿ ಸಾಕಷ್ಟು ವರ್ಷಗಳಿಂದ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಮರಳು ಗಣಿಗಾರಿಕೆಯೇ ಭೂಮಿಯ ಮೇಲ್ಭಾಗದ ಕಂಪನಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ತಾಲ್ಲೂಕು ತಹಸೀಲ್ದಾರ್ ದಿನೇಶ್ ಚಂದ್ರ, ತಾ ಪಂ ಅಧ್ಯಕ್ಷರಾದ ಆರ್.ಎನ್.ವಿಶ್ವಾಸ್, ಇಒ ಮಣಿಕಂಠ, ಜಿ ಪಂ ಸದಸ್ಯರಾದ ಜಯಕಾಂತ ಸೇರಿದಂತೆ ಹಲವಾರು ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin