ಭೂಕುಸಿತ: ನಾಲ್ವರು ವೈಷ್ಣೋದೇವಿ ಯಾತ್ರಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

sdgSgGSDG

ಜಮ್ಮು, ಆ.6- ನಿನ್ನೆ  ರಾತ್ರಿ ಸುರಿದ ಭಾರೀ  ಮಳೆಯಿಂದ ಭೂಕುಸಿತ  ಉಂಟಾಗಿ ನಾಲ್ವರು  ಯಾತ್ರಿಕರು  ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.  ಜಮ್ಮುಕಾಶ್ಮೀರದ ರಿಯಾಸಿ  ಜಿಲ್ಲೆಯ  ಮಾತಾ ವೈಷ್ಣೋದೇವಿ  ಗುಹಾಂತರ ದೇವಾಲಯಕ್ಕೆ ಯಾತ್ರಿಕರು ತೆರಳಿದ್ದ ವೇಳೆ ಮಧ್ಯರಾತ್ರಿ ಭಾರೀ ಮಳೆಯಾಗಿದ್ದು,  ಬಾನ್ಗಂಹಾ- ಅರ್ಧಕುವರಿ ರಸ್ತೆಯಲ್ಲಿ  ಭೂಕುಸಿತ ಉಂಟಾದ ಪರಿಣಾಮ  ತಂಗುದಾಣದಲ್ಲಿ  ಕುಳಿತಿದ್ದ ಯಾತ್ರಿಗಳ ಮೇಲೆ ಅವಶೇಷಗಳು ಬಿದ್ದು ಈ ದುರಂತ ಸಂಭವಿಸಿದೆ.   ದುರಂತದಲ್ಲಿ ಮಗು ಸೇರಿ ನಾಲ್ವರು ಯಾತ್ರಿಕರು ಸಾವನ್ನಪ್ಪಿದ್ದರೆ, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

4 pilgrims killed in landslide at Vaishno Devi shrine

Facebook Comments

Sri Raghav

Admin