ಭೂತೋಚ್ಚಾಟನೆಗಾಗಿ ಬೆತ್ತಲೆಗೊಳಿಸಿ ಮಹಿಳೆಯ ಜೀವಂತ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

Women-Burn-0

ಮನಗುವಾ, ಮಾ.2-ಅಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಭಯಾನಕ ಮತ್ತು ಅತ್ಯಂತ ಕ್ರೂರ ಆಚರಣೆ ಈಗಲೂ ಜಾರಿಯಲ್ಲಿದೆ. ಭೂತೋಚ್ಚಾಟನೆ (ದೆವ್ವವನ್ನು ಓಡಿಸುವ ಕಂದಾಚಾರ) ಆಚರಣೆಗಾಗಿ 25 ವರ್ಷದ ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ, ಕೈ ಕಾಲುಗಳನ್ನು ಕಟ್ಟಿ ಹಾಕಿ ಬೆಂಕಿಗೆ ಆಹುತಿ ನೀಡಿದ ಘಟನೆ ನಿಕರಾಗುವಾದ ಮನಗುವಾದಲ್ಲಿ ನಡೆದಿದೆ.
ಬುಡಕಟ್ಟು ನಿವಾಸಿಗಳ ಈ ಮೂಢನಂಬಿಕೆಗೆ ವಿಲ್ಮಾ ಟ್ರುಜಿಲ್ಲೋ ಎಂಬ ಮಹಿಳೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಲ್ಮಾಗೆ ದೆವ್ವ ಹಿಡಿದಿದೆ ಎಂಬ ಕಾರಣಕ್ಕಾಗಿ ಮನುಗುವಾದ ದೂರದ ಕುಗ್ರಾಮವೊಂದರಲ್ಲಿ ಮೂಲವಾಸಿಗಳು ಈ ಕೃತ್ಯ ಎಸಗಿದ್ದಾರೆ. ಈ ಭೀಕರ ಘಟನೆಯನ್ನು ದೇಶದ ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷೆ ರೊಸಾರಿಯೊ ಮುರಿಲ್ಲೋ ಖಂಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin