ಭೂಮಿಗೆ ಸಮೀಪದಲ್ಲಿ ಹಾದು ಹೋದ ಬೃಹತ್ ಕ್ಷುದ್ರಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Astroid--001

ವಾಷಿಂಗ್ಟನ್, ಏ.21-ಸುಮಾರು 1.3 ಕಿ.ಮೀ. ವ್ಯಾಸವಿರುವ ಬೃಹತ್ ಕ್ಷುದ್ರಗ್ರಹ (ಬ್ಯಾಹಾಕಾಶ ಶಿಲೆ) ಭೂಮಿಗೆ ಸಮೀಪದಲ್ಲಿ ಹಾದು ಹೋಗಿದೆ. ದೈತ್ಯಾಕಾರದ ಆಕಾಶಕಾಯವನ್ನು ಹತ್ತಿರದಿಂದ ವೀಕ್ಷಿಸಿ ಸಂಶೋಧನೆ ನಡೆಸುವ ಅವಕಾಶ ಖಗೋಳ ವಿಜ್ಞಾನಿ ಗಳಿಗೆ ಲಭಿಸಿತು.   2014-ಜೆಒ25 ಎಂಬ ಹೆಸರಿನ ಕ್ಷುದ್ರಗ್ರಹವು ಭಾರತೀಯ ಕಾಲಮಾನ ಬುಧವಾರ ಸಂಜೆ 5.50ರಲ್ಲಿ ವಸುಂಧರೆಯ ಅತ್ಯಂತ ಸಮೀಪಕ್ಕೆ ಆಗಮಿಸಿತು.



ಅದು ಈಗ ನಮ್ಮ ಸೌರವ್ಯೂಹದ ಕೇಂದ್ರ ಬಿಂದುವಿನಿಂದ ಬಹು ದೂರಕ್ಕೆ ಚಲಿಸುತ್ತಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿ ಇಯಾನ್ ಕ್ಯಾರ್ನಲಿ ತಿಳಿಸಿದ್ದಾರೆ. ಇದು ಭೂಮಿಯಿಂದ 18 ಲಕ್ಷ ಕಿ.ಮೀ. ಅಂತರದಲ್ಲಿ ಹಾದು ಹೋಗಿದ್ದು, ಭೂಮಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin