‘ಭೂಮಿಪುತ್ರ’ನಾಗಿ ಕುಮಾರಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು,ಮೇ.1- ಮುಖ್ಯಮಂತ್ರಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಹಲವಾರು ಜನಪ್ರಿಯ ಯೋಜನೆಗಳನ್ನು ರೂಪಿಸಿದ್ದರಿಂದ ಕೇವಲ 20 ತಿಂಗಳ ಅವಧಿಗೆ ಸಿಎಂ ಆಗಿದ್ದರೂ ಕರ್ನಾಟಕದ ಜನರ ದೃಷ್ಟಿಯಲ್ಲಿ ಉತ್ತಮ ನಾಯಕನೆನಿಸುವ ಎಚ್.ಡಿ.ಕುಮಾರಸ್ವಾಮಿ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.   ಬಣ್ಣದ ಜಗತ್ತು ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿಗೂ ಕರ್ನಾಟಕದ ಜನರ ಸಿಎಂ ಆಯ್ಕೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂಬುದು ಚಿತ್ರ ತಯಾರಿಕೆಗೆ ಹೈಲೆಟ್ ಎನಿಸಿದೆ.  ಈಗಾಗಲೇ ಸಾಕಷ್ಟು ತಯಾರಿಯೂ ನಡೆದಿದ್ದು , ಚಿತ್ರದ ಟೈಟಲ್ ಕೂಡ ಫೈನಲ್ ಆಗಿದೆ. ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶಿಸುತ್ತಿರುವ ಈ ಚಿತ್ರದ ಹೆಸರನ್ನು ಭೂಮಿ ಪುತ್ರ ಎಂದು ಇಡಲು ಸಿದ್ದತೆ ನಡೆದಿದೆ.ಒಂದು ದಿನ ಮುಖ್ಯಮಂತ್ರಿಯಾಗುವ ಅವಕಾಶ ಗಿಟ್ಟಿಸಿಕೊಂಡು ರಾಜ್ಯವಾಳಿದ್ದ ಕಥಾನಾಯಕನೇ ನಂತರ ಮುಖ್ಯಮಂತ್ರಿಯಾಗಿ ಗದ್ದುಗೇರಿದ್ದ ಕಥೆಯಿದ್ದ ಚಲನಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅರ್ಜುನ್ ಸರ್ಜ ಕುಮಾರಸ್ವಾಮಿ ಅವರ ಕಾರ್ಯ ವೈಖರಿಯನ್ನಾಧರಿಸಿ ನಿರ್ಮಿಸುತ್ತಿರುವ ಚಿತ್ರದಲ್ಲೂ ನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ.   ಈ ಚಿತ್ರ ಮೇ 8ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.   ತಮ್ಮ ಜೀವನವನ್ನು ಸಿನಿಮಾ ಮಾಡುವ ಪ್ರಸ್ತಾಪವನ್ನು ಕುಮಾರಸ್ವಾಮಿ ಅವ ಬಳಿ ಇಟ್ಟಾಗ ಅವರು ಮೊದಲು ನಿರಾಕರಿಸಿದರಂತೆ. ಕೊನೆಗೆ ಅವರ ಹತ್ತಿರ ಮಾತನಾಡಿ ಒಬ್ಬ ಮುಖ್ಯಮಂತ್ರಿ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟರೆ, ಮದರಿ ಆದಂತಾಗುತ್ತದೆ. ಈ ಬಗ್ಗೆ ಹೇಳಿದಾಗ, ಮಾದರಿ ಆಗುವುದಾದರೆ ಚಿತ್ರ ಮಾಡಿ ಎಂದು ಒಪ್ಪಿಗೆ ಕೊಟ್ಟಿದ್ದು , ಆದರೆ, ಯಾವುದೇ ಕಾರಣಕ್ಕೂ ತಮ್ಮನ್ನು ವೈಭವೀಕರಿಸಬಾರದು ಎಂದು ಸ್ಪಷ್ಪಪಡಿಸಿದ್ದರಂತೆ.

ಇನ್ನು ಈ ಚಿತ್ರವನ್ನು ಪ್ರಭುಕುಮಾರ್ ಅವರು ನಿರ್ಮಿಸುತ್ತಿದ್ದಾರೆ. ಇದೊಂದು ಬಿಗ್ ಬಜೆಟ್ ಅಷ್ಟೇ ಅಲ್ಲ. ದೊಡ್ಡ ತಾರಾಗಣದ ಚಿತ್ರವಾಗಲಿದೆಯಂತೆ. ಚಿತ್ರದಲ್ಲಿ ಸುಮಾರು 125 ಪಾತ್ರಗಳಿವೆ. ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.  ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಸಾಮಾನ್ಯ ಜನರ ಕೈಗೂ ಅವರು ಸಿಗುತ್ತಿದ್ದರು. ಜನರ ಜೊತೆ ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟಗಳಿಗೆ ಹಟ್ಟಿದ ದಿನ ಸ್ಪಂದಿಸುತ್ತಿದ್ದರು. ನಿರ್ಮಾಪಕರು ಅವರ ಆಡಳಿತದ ಬಗ್ಗೆ ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಹೇಳಿದರು.   ನನಗೂ ಅದು ಇಷ್ಟವಾಗಿ ನಿರ್ದೇಶನ ಮಾಡಲು ಒಪ್ಪಿಕೊಂಡೆ ಎಂದು ಎಸ್.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin