ಭೂಮಿಯನ್ನು ಹೋಲುವ ಹೊಸ ಸಪ್ತಗ್ರಹಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Earth-Sized--01

ವಾಷಿಂಗ್ಟನ್, ಫೆ.23-ಊಹಾತೀತ ವಿಸ್ಮಯಗಳ ಆಗರವಾಗಿರುವ ಸೌರಮಂಡಲ ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು ಭೂಮಿಯನ್ನು ಹೋಲುವ ಏಳು ಹೊಸ ಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಭೂಮಿಯಿಂದ ಕೇವಲ 40 ಪ್ರಭಾ ವರ್ಷಗಳ (235 ಶತಲಕ್ಷ ಕೋಟಿ ಮೈಲಿಗಳು) ದೂರದಲ್ಲಿರುವ ಈ ಸಪ್ತ ಗ್ರಹಗಳಲ್ಲಿ ನೀರಿನ ಮೂಲವಿದ್ದು, ಅನ್ಯಗ್ರಹ ಜೀವಿಗಳು ಇರುವ ಸಾಧ್ಯತೆ ಬಗ್ಗೆ ಹೊಸ ಸಂಶೋಧನೆಗೆ ಬೆಳಕು ಚೆಲ್ಲಲು ಕಾರಣವಾಗಿದೆ.  ಈ ಏಳು ಗ್ರಹಗಳಲ್ಲಿ ಮೂರು, ಅಂತರಿಕ್ಷದಲ್ಲಿ ವಾಸಯೋಗ್ಯ ವಲಯದಲ್ಲೇ ಕಂಡು ಬಂದಿರುವುದು ಕುತೂಹಲ ಕೆರಳಿಸಿದೆ. ಈ ಪ್ರದೇಶವನ್ನು ನಕ್ಷತ್ರಗಳು ಆವರಿಸಿದ್ದು, ಬಂಡೆಯಂಥ ಗ್ರಹಗಳಲ್ಲಿ ನೀರಿನ ಮೂಲವು ಪತ್ತೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಈ ಸಪ್ತ ಗ್ರಹಗಳ ಸಮೂಹಕ್ಕೆಟ್ರಾಪಿಸ್ಟ್-1 ಎಂದು ನಾಮಕರಣ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin