ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

EaRTH--01

ವಾಷಿಂಗ್ಟನ್, ಏ.21- ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ಶೀತವೂ ಅಲ್ಲದ ಜೀವಿಗಳಿಗೆ ಪೂರಕವಾದ ವಾತಾವರಣವಿರುವ ಮತ್ತೊಂದು ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಹೊಸ ಗ್ರಹವು ಭೂಮಿಗೆ ಹೆಚ್ಚು ದೂರದಲ್ಲಿಲ್ಲ.   ಈ ನೂತನ ಬೃಹತ್ ಗ್ರಹವು ಭೂಮಿಯಂತೆ ಬಂಡೆಕಲ್ಲುಗಳು ಮತ್ತು ಮಣ್ಣನ್ನು ಹೊಂದಿದೆ. ನೀರಿಗೆ ಅಗತ್ಯವಾದ ಉಷ್ಣತೆಯೂ ಇದರಲ್ಲಿದೆ. ಜೀವಿಗಳ ವಾಸಕ್ಕೆ ಯೋಗ್ಯವಾದ ಪೂರಕ ವಲಯ ಕೂಡ ಇದರಲ್ಲಿ ಕಂಡುಬಂದಿದೆ.ನೇಚರ್ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಹೊಸ ಗ್ರಹದ ಮೇಲೆ ಬೆಳಕು ಚೆಲ್ಲಿದೆ. ಇದು ಒಂದು ವರ್ಷದೊಳಗೆ ಮತ್ತು ಕಡಿಮೆ ಅವಧಿಯಲ್ಲಿ ಸೌರವ್ಯೂಹದಿಂದ ಹೊರಗೆ ಪತ್ತೆಯಾಗಿರುವ ಭೂಮಿಯನ್ನು ಹೋಲುವ ಐದನೇ ಗ್ರಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin