ಭೂಮಿ ಹೋಲುವ ಬೃಹದಾಕಾರದ ಗ್ರಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Earth

ಪ್ಯಾರಿಸ್, ಆ.25- ಅನೇಕಾನೇಕ ವಿಸ್ಮಯ ಸಂಗತಿಗಳನ್ನು ತನ್ನೊಡಲಲ್ಲಿ ಬಿಚ್ಚಿಟ್ಟು ಕೊಂಡಿರುವ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ ಬೃಹದಾ ಕಾರದ ಗ್ರಹವೊಂದು ಪತ್ತೆಯಾಗಿದೆ.
ಸೂರ್ಯನಿಗೆ ಸಮೀಪವಿರುವ ನಕ್ಷತ್ರದ ಬಳಿ ಭೂಮಿಯ ಗಾತ್ರದ ಗ್ರಹವೊಂದು ಪ್ರದಕ್ಷಿಣೆ ಹಾಕುತ್ತಿದೆ ಎಂದು ವಿಜ್ಞಾನಿಗಳು ಇಂದು ಪ್ರಕಟಿಸಿದ್ದಾರೆ.  ವಸುಂಧರೆಯನ್ನು ಹೋಲುವ ಗ್ರಹ ಪತ್ತೆಯಾಗಿರುವುದರಿಂದ ಅಲ್ಲಿಯೂ ವಾಸ ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಮುಂದಿನ ದಿನಗಳಲ್ಲಿ ರೋಬೊ (ಯಂತ್ರ ಮಾನವ) ರವಾನಿಸುವ ವಿದ್ಯಮಾನಕ್ಕೆ ಇದರಿಂದ ಇಂಬು ದೊರೆತಂತಾಗಿದೆ. ಇಳೆಯಂತಿರುವ ಈ ಗ್ರಹಕ್ಕೆ ಪ್ರಾಕ್ಸಿಮಾ-ಬಿ ಎಂದು ನಾಮಕರಣ ಮಾಡಲಾಗಿದೆ. ಇದು ಸಮಶೀತೋಷ್ಣ ವಲಯ ಹೊಂದಿದ್ದು, ನೀರು ಸಹ ಪತ್ತೆಯಾಗಿದೆ.
ಮನುಕುಲದ ವಾಸಕ್ಕೆ ಮುಖ್ಯ ವಾಗಿರುವ ಇವೆರಡೂ ಅಲ್ಲಿ ಕಂಡು ಬಂದಿರುವುದರಿಂದ ಇನ್ನೊಂದು ಭೂಗ್ರಹದ ಮೇಲೆ ಮನುಷ್ಯರು ವಾಸಿಸಬಹುದಾದ ಆಶಾಭಾವನೆಗೆ ಪುಷ್ಟಿ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin