ಭೂಲೋಕದ ಸ್ವರ್ಗ ಸ್ವಿಟ್ಜರ್‍ಲೆಂಡ್’ನ ಪ್ರವಾಸೋದ್ಯಮಕ್ಕೆ ರಣವೀರ್ ರಾಯಭಾರಿ

ಈ ಸುದ್ದಿಯನ್ನು ಶೇರ್ ಮಾಡಿ

Ranaveer-Singh--01

ಜನಪ್ರಿಯತೆಯ ಉತ್ತುಂಗದಲ್ಲಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದಾನೆ. ಭೂಲೋಕದ ಸ್ವರ್ಗ ಸೀಮೆ ಸ್ವಿಟ್ಜರ್‍ಲೆಂಡ್ ಪ್ರವಾಸೋದ್ಯಮಕ್ಕೆ ರಣವೀರ್ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದಾನೆ.  2017ರ ಸ್ವಿಟ್ಜರ್‍ಲೆಂಡ್ ಪ್ರವಾಸೋದ್ಯಮ ಆಂದೋಲನ ಪ್ರರ್ವತನೆಗಾಗಿ ರಣವೀರ್‍ನನ್ನು ಇಂಡಿಯನ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. `ನೇಚರ್ ವಾಂಟ್ಸ್ ಯು ಬ್ಯಾಕ್’ ಎಂಬುದು ಪ್ರವಾಸೋದ್ಯಮ ಪ್ರಚಾರಾಂದೋಲನದ ಧ್ಯೇಯವಾಕ್ಯವಾಗಿದೆ. ಸಿನಿಮ ಶೂಟಿಂಗ್‍ಗಾಗಿ ಮೂರು ತಿಂಗಳ ಹಿಂದಷ್ಟೇ ಸ್ವಿಟ್ಜರ್‍ಲೆಂಡ್‍ಗೆ ಹೋಗಿ ಬಂದಿದ್ದ 31 ವರ್ಷದ ನಟ ರಣವೀರ್‍ಗೆ ಹೊಸ ಜವಾಬ್ದಾರಿಯು ರೋಮಾಂಚನ ಉಂಟು ಮಾಡಿದೆ.

ಪ್ರಶಾಂತ ವಾತಾವರಣ ಮತ್ತು ನಿಸರ್ಗ ಚೆಲುವಿನಿಂದಾಗಿ ಸ್ವಿಟ್ಜರ್‍ಲೆಂಡ್ ವಿಶ್ವವಿಖ್ಯಾತವಾಗಿದೆ. ಭೂಲೋಕದ ಸ್ವರ್ಗದಂತಿರುವ ಆ ದೇಶಕ್ಕೆ ಹೋಗಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದು ನನ್ನ ಸಿನಿಮಾ ಬದುಕಿನ ಮೂಲಕ ಈಡೇರಿದೆ. ಈಗ ಪ್ರವಾಸೋದ್ಯಮ ರಾಯಭಾರಿಯಾಗಿ ಮತ್ತೆ ಸ್ವಿಸ್‍ಗೆ ಹೋಗಬೇಕಾಗಿರುವುದು ನನ್ನ ಅದೃಷ್ಟ ಎಂದು ಆರ್‍ಕೆ ಹೇಳಿದ್ದಾನೆ. ಆಗಸ್ಟ್‍ನಲ್ಲಿ ಶೂಟಿಂಗ್‍ಗಾಗಿ ಸ್ವಿಸ್‍ಗೆ ತೆರಳಿದ್ದ ವೇಳೆ ಲೇಕ್ ಜೂರಿಚ್‍ನಲ್ಲಿ ವೇಕ್‍ಬೋರ್ಡಿಂಗ್, ಪ್ಯಾರಾಗ್ಲೈಡಿಂಗ್, ಸ್ಕೈಡೈವಿಂಗ್ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿ ಥ್ರಿಲ್ ಆಗಿದ್ದಾಗಿ ರಣವೀರ್ ಖುಷಿಯಿಂದ ಹೇಳಿಕೊಂಡಿದ್ದಾನೆ.

► Follow us on –  Facebook / Twitter  / Google+

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin