ಭೂಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಲೆ.ಜ. ಬಿಪಿನ್ ರಾವತ್
ನವದೆಹಲಿ, ಡಿ. 31 : ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂ ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಮಧ್ಯಾಹ್ನ ನಿರ್ಗಮಿತ ಸೇನಾ ಮುಖ್ಯಸ್ಥರಾದ ದಲ್ಬಿರ್ ಸಿಂಗ್ ಸುಹಾಗ್ ಹಾಗೂ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಅವರು ಎರಡು ಪಡೆಗಳ ಅಧಿಕಾರವನ್ನು ಹಸ್ತಾಂತರಿಸಿದರು.
ಅಧಿಕಾರ ಹಸ್ತಾಂತರಿಸುವ ಮೊದಲು ನಿವೃತ್ತಿ ಹೊಂದಲಿರುವ ದಲ್ಬೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಅನುಪ್ ರಾಹಾ ಇಂಡಿಯಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
Gen Dalbir Singh hands over the command to 27th #COAS Gen Bipin Rawat in an impressive ceremony at South Block today. pic.twitter.com/1aOve6PuuF
— ADG PI – INDIAN ARMY (@adgpi) December 31, 2016
ನಿವೃತ್ತಿಗೂ ಮೊದಲು ಮಾತನಾಡಿದ ಯಾವುದೇ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗುತ್ತಿರುವ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ. ತಮ್ಮ ನಿವೃತ್ತಿ ಸಂದರ್ಭದಲ್ಲಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏಕ ಶ್ರೇಣಿ ಏಕ ಪಿಂಚಣಿ (ಒಆರ್ಒಪಿ) ನೀತಿ ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಕಳೆದ ವರ್ಷ ಗಡಿ ಭಾಗದಲ್ಲಿ ಒಳನುಸುಳುವಿಕೆ ಯತ್ನಗಳು ಗಣನೀಯವಾಗಿ ಹೆಚ್ಚಾಗಿತ್ತು ಮತ್ತು ಭಯೋತ್ಪಾದಕರನ್ನು ಕೊಂದು ಹಾಕಿದ ಪ್ರಕರಣಗಳೂ ಇಮ್ಮಡಿಯಾಗಿತ್ತು ಎಂದು ಅವರು ಹೇಳಿದರು.
ಆಗಿದ್ದವರು ವಾಯುಪಡೆ ಮುಖ್ಯಸ್ಥರಾಗಿರುವುದು ಇದೆ ಮೊದಲು :
ಇನ್ನು ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಏರ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಯುದ್ಧ ವಿಮಾನದ ಪೈಲಟ್ ಆಗಿದ್ದವರು. ಹಾಗೂ ವಾಯುಪಡೆ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಕಾರ್ಗಿಲ್ ಯುದ್ಧದ ಸಂದರ್ಭ ಸ್ವತಃ ಯುದ್ಧ ವಿಮಾನ ಚಲಾಯಿಸಿದ್ದರು. ಇದೇ ಪ್ರಥಮ ಬಾರಿಗೆ ಯುದ್ಧ ವಿಮಾನದಲ್ಲಿ ಪೈಲಟ್ ಆಗಿದ್ದವರು ವಾಯುಪಡೆ ಮುಖ್ಯಸ್ಥರಾಗುತ್ತಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ – Click Here to Download