ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಚೀನಾ ಫೇಲ್

ಈ ಸುದ್ದಿಯನ್ನು ಶೇರ್ ಮಾಡಿ

China-001

ಬೀಜಿಂಗ್, ಸೆ.3-ಅತ್ಯಾಧುನಿಕ ತಂತ್ರಜನವನ್ನು ಹೊಂದಿರುವ ವಿಶ್ವದ ಮುಂದುವರಿದ ರಾಷ್ಟ್ರ ಎಂದೇ ಬೀಗುತ್ತಿರುವ ಚೀನಾ ದೇಶ ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿದೆ ಎಂಬ ಸುದ್ದಿಯೊಂದು ಬಲ್ಲಮೂಲಗಳಿಂದ ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.  ಚೀನಾದ ಉತ್ತರ ಪ್ರಾಂತ್ಯದಲ್ಲಿರುವ ಶಾಂಕ್ಸಿ ನಗರದ ತೈಯಾನ್ ಉಡಾವಣಾ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಲಾಂಗ್ಮಾರ್ಚ್ 4ಸಿ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿದೆ ಎಂದು ಚೀನಾದ ದಿನಪತ್ರಿಕೆ ಇಎಫ್ಇ ವರದಿಮಾಡಿದೆ.  ಎಂಬ ಅಂತರಿಕ್ಷಯಾನ ತಜ್ಞರು ನಡೆಸುತ್ತಿರುವ ವೆಬ್ಸೈಟ್ ಮೂಲದಿಂದ ಈ ಮಾಹಿತಿ ಸಿಕ್ಕಿದ್ದು, ಶಾಂಕ್ಸಿ ಪ್ರಾಂತ್ಯದ ಪೊಲೀಸರು ವೈಬೊ ಪೋಸ್ಟ್ ಮೂಲಕ ಉಪಗ್ರಹ ಉಡಾವಣೆ ವಿಫಲಗೊಂಡಿರುವ ಬಗ್ಗೆ ಖಚಿತಪಡಿಸಿದ್ದಾಗಿ ಪತ್ರಿಕೆ ಹೇಳಿಕೊಂಡಿದೆ.

ಇನ್ನು ಚೀನಾದ ಟ್ವಿಟ್ಟರ್ ಖಾತೆಯಲ್ಲಿಯೂ ಉಪಗ್ರಹದ ಅವಶೇಷಗಳ ಹುಡುಕಾಟದ ಬಗೆಗಿನ ಫೋಟೋಗಳು ತುಂಬಿ ಹೋಗಿದ್ದವು. ಆದರೆ ಕೆಲವೇ ಕ್ಷಣಗಳಲ್ಲಿ ಟ್ವಿಟ್ಟರ್ನಿಂದ ಈ ಫೋಟೋಗಳನ್ನು ಅಳಿಸಿ ಹಾಕಲಾಗಿದೆ. ಚೀನಾ ಈ ದಶಕದಾಂತ್ಯಕ್ಕೆ ಕಕ್ಷೆ ಸೇರಿಸಬೇಕೆಂದು ಬಯಸಿರುವ ಗಫೇನ್ ಸರಣಿಯ 7 ಭೂ ವೀಕ್ಷಣಾ ಉಪಗ್ರಹಗಳ ಪೈಕಿ ಇದೂ ಒಂದಾಗಿದೆ. ಇವುಗಳಲ್ಲಿ ಒಂದು ಉಪಗ್ರಹವನ್ನು ಚೀನಾ 3 ವರ್ಷಗಳ ಹಿಂದೆ ಉಡಾವಣೆ ಮಾಡಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin