ಭೇಷ್ ಮಕ್ಕಳೇ..! : ಪಟಾಕಿ ಸುಡುವುದಿಲ್ಲ ಎಂದು ಶಪಥ ಮಾಡಿದ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Janani-001

ಬೆಂಗಳೂರು, ಅ.29– ದೀಪಾವಳಿ ಹಬ್ಬದಲ್ಲಿ ಪಟಾಕಿಗಳಿಂದ ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯ ಹೆಚ್ಚಾಗಿ ವಾತಾವರಣ ಕಲುಷಿತವಾಗುವ ಹಿನ್ನೆಲೆಯಲ್ಲಿ ಬಸವೇಶ್ವರ ನಗರದ ಜನನಿ ವಿದ್ಯಾಮಂದಿರದ ವಿದ್ಯಾರ್ಥಿಗಳು ನಾವು ಪಟಾಕಿ ಸುಡುವುದಿಲ್ಲ ಎಂದು ಶಾಲೆಯಲ್ಲಿ ಶಪಥ ಮಾಡಿದರು. ನಾವು ಪುಟಾಣಿಗಳು. ಮುಂದಿನ ಪೀಳಿಗೆಗೆ ಸಂದೇಶವನ್ನು ಈ ಮೂಲಕ ರವಾನಿಸುತ್ತೇವೆ. ಮನುಕುಲಕ್ಕೆ ಆಗುವ ಅನಾಹುತವನ್ನು ಎಚ್ಚರಿಸುತ್ತೇವೆ ಎಂದು ಶಾಲಾ ಶಿಕ್ಷಕರು, ಆಡಳಿತ ಮಂಡಳಿಯವರೊಂದಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಟಾಕಿ ಸುಡುವುದಿಲ್ಲ, ನೀವೂ ಪಟಾಕಿ ಹಚ್ಚಬೇಡಿ. ಪರಿಸರವನ್ನು ಹಾಳು ಮಾಡಬೇಡಿ ಎಂಬ ಘೋಷಣೆಯನ್ನು ಮೊಳಗಿಸಿದರು.

ವಾತಾವರಣವನ್ನು ಹಾಳು ಮಾಡಬೇಡಿ, ಪಟಾಕಿ ಸಿಡಿಸಬೇಡಿ, ಪ್ಲ್ಯಾಸ್ಟಿಕ್ ಕಸ, ಕಡ್ಡಿಗಳಿಗೆ ಬೆಂಕಿ ಹಚ್ಚಬೇಡಿ ಎಂದು ಘೋಷಣೆ ಕೂಗುತ್ತಾ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಜಾಥಾ ನಡೆಸಿ ಜನರಲ್ಲಿ ತಿಳುವಳಿಕೆ ಮೂಡಿಸಿದರು.  ನಗರದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಕಸ, ಕಡ್ಡಿಗಳನ್ನು ಮನೆಯ ಕಸವೂ ಸೇರಿದಂತೆ ರಸ್ತೆ ಬದಿ ಬಿಸಾಡಿ ಅದನ್ನು ತೆಗೆದುಕೊಂಡು ಹೋಗಲಾರದೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ, ಪ್ಲ್ಯಾಸ್ಟಿಕ್ ಟಯರ್, ಕಚ್ಚಾವಸ್ತುಗಳನ್ನು ಹಳ್ಳಕೊಳ್ಳಗಳಲ್ಲಿ ಹಾಕಿ ಬೆಂಕಿ ಹಚ್ಚಿ ಪರಿಸರ ಹಾಳಾಗಲು ಕಾರಣವಾಗುತ್ತಿದೆ. ರಸ್ತೆ ಬದಿಯಲ್ಲಿ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಿಸಿ ನೀರು ಇಂಗದಂತೆ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ಪಟಾಕಿ ಸುಡುವುದರ ಮೂಲಕ ಮತ್ತಷ್ಟು ಪರಿಸ್ಥಿತಿಯನ್ನು ಹಾಳು ಮಾಡುವುದು ಬೇಡ ಎಂದು ಜನನಿ ವಿದ್ಯಾಮಂದಿರದ ಕಾರ್ಯದರ್ಶಿ ಪುಟ್ಟಸ್ವಾಮಿ ಗೌಡ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin