ಭೋಪಾಲ್ ಸೆಂಟ್ರಲ್ ಜೈಲ್ ನಿಂದ 8 ಮಂದಿ ಸಿಮಿ ಉಗ್ರರು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

SIMI

ಭೋಪಾಲ್ ಅ.31 ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ನಿಷೇಧಿತ ಸಿಮಿ ಸಂಘಟನೆಯ 8 ಮಂದಿ ಉಗ್ರರು ಪರಾರಿಯಾಗಿದ್ದಾರೆ. ಕಳೆದ ತಡರಾತ್ರಿಯಲ್ಲಿ ಉಗ್ರರು ಜೈಲಿನ ಭದ್ರತಾ ಸಿಬ್ಬಂದಿಯನ್ನು ಕೊಂದು, ಜೈಲಿನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.. ಪರಾರಿಯಾಗಿರುವ ಎಲ್ಲ ಉಗ್ರರು 1977 ಏಪ್ರಿಲ್ ನಲ್ಲಿ ಭಾರತದಿಂದ ನಿಷೇಧಕ್ಕೆ ಒಳಪಟ್ಟಿದ್ದ ಸ್ಟೂಡೆಂಟ್ಸ್ ಆಫ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗೆ ಸೇರಿದ ಉಗ್ರರು. ಉಗ್ರರು ಜೈಲಿನಿಂದ ಪರಾರಿಯಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉಗ್ರರ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭೋಪಾಲ್ ನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಭೋಪಾಲ್ ಅನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್ ಸೆಂಟ್ರಲ್ ಜೈಲ್ ನಲ್ಲಿ ಭಾನುವಾರ ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದ ರಮಾಶಂಕರ್ ಎಂಬ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನನ್ನು ಚಾಕುವಿನಿಂದ ಇರಿದು ಉಗ್ರರು ಕೊಂದು ಜೈಲು ಗೋಡೆ ಹಾರಿ ಪರಾರಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆಯೂ ಖಂಡ್ವಾ ಜೈಲಿನಿಂದ ಇದೇ ಸಿಮಿ ಸಂಘಟನೆಯ 7 ಮಂದಿ ಉಗ್ರರು ಇದೇ ರೀತಿ ಜೈಲು ಗೋಡೆ ಹಾರಿ ಪರಾರಿಯಾಗಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin