ಮಂಗಳೂರನ್ನು ನರಕ ಎಂದ ರಮ್ಯಾಗೆ ಮೊಟ್ಟೆ ಏಟು

ಈ ಸುದ್ದಿಯನ್ನು ಶೇರ್ ಮಾಡಿ

Ramya

ಮಂಗಳೂರು. ಆ.25 : ಕೃಷ್ಣ ಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ನಗರಕ್ಕೆ ಬಂದ ಮಾಜಿ ಸಂಸದೆ ರಮ್ಯಾ ಅವರ ಕಾರಿಗೆ ಬಜ್ಪೆ ವಿಮಾನ ನಿಲ್ದಾಣದ ಬಳಿ ಮೊಟ್ಟೆ ಎಸೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಪಾಕಿಸ್ತಾನದ ಜನರ ಪರ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿರುವ ರಮ್ಯಾ, ಖಾಸಗಿ ಸುದ್ದಿ ವಾಹಿನಿಯಲ್ಲಿ ಮಂಗಳೂರಿನಲ್ಲೂ ನರಕ ಇದೆ ಎಂದು ಹೇಳಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ದೂರಿದರು. ಈಚೆಗೆ ಬ್ರಹ್ಮಾವರ ಸಮೀಪ ಪ್ರವೀಣ್‌ ಪೂಜಾರಿ ಅವರ ಕೊಲೆಗೆ ಸಂಬಂಧಿಸಿದಂತೆ ರಮ್ಯಾ ಮಂಗಳೂರು ನರಕ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ.

ಗುರುವಾರ ಸಂಜೆ 4.30 ಕ್ಕೆ ಇಲ್ಲಿಯ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಮ್ಯಾ ಬಂದಿಳಿದರು. ಪೊಲೀಸ್‌ ಬಿಗಿ ಬಂದೋಬಸ್ತ್‌ ಮಧ್ಯೆಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು. ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ ರಮ್ಯಾ ಅವರಿದ್ದ ಕಾರಿಗೆ ಕಾರ್ಯಕರ್ತರು ಮೊಟ್ಟೆ ಎಸೆದರು.  ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅಲ್ಲದೆ ಕೆಲವರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin