ಮಂಗಳೂರಲ್ಲಿ ಮತ್ತೆ ಚಿಮ್ಮಿತು ರಕ್ತ, ಟಾರ್ಗೆಟ್ ಗ್ರೂಪ್ ನ ರೌಡಿ ಇಲಿಯಾಸ್ ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Mangalore-Murder-Ilias-02

ಮಂಗಳೂರು,ಜ.13-ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ನಗರದ ಟಾರ್ಗೆಟ್ ಗ್ರೂಪ್‍ನ ನಟೋರಿಯಸ್ ರೌಡಿ ಇಲಿಯಾಸ್‍ನನ್ನು ಚಾಕುವಿನಿಂದ ಇರಿದು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಒಂದೇ ಕೋಮಿನ ಗ್ಯಾಂಗ್ ವಾರ್‍ನಲ್ಲಿ ಇಲಿಯಾಸ್‍ನನ್ನು ನಗರದ ಜಪ್ಪನಮೊಗರಿನಲ್ಲಿರುವ ಮನೆಯಲ್ಲೇ ಎದುರಾಳಿ ಗುಂಪಿನವರು 10ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾರೆ.

ದಾಳಿ ವೇಳೆ ಇಲಿಯಾಸ್ ಎದೆಗೆ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದರು. ತಕ್ಷಣವೇ ಅವರನ್ನು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.  ಈ ಘಟನೆಯಿಂದ ಮಂಗಳೂರಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಯಾರು ಈ ಇಲಿಯಾಸ್:

ಟಾರ್ಗೆಟ್ ಗ್ರೂಪ್‍ನ ಮುಖಂಡನಾಗಿದ್ದ ಇಲಿಯಾಸ್ ಮಂಗಳೂರಿನಲ್ಲಿ ಈ ಹಿಂದೆ ನಡೆದ ಅನೇಕ ಕೊಲೆ, ಸುಪಾರಿ, ಹತ್ಯೆ ಹಾಗೂ ಕೋಮುಗಲಭೆಯಲ್ಲಿ ಈತನ ಕೈವಾಡವಿತ್ತು ಎಂದು ಶಂಕಿಸಲಾಗಿದೆ. ನಿನ್ನೆಯಷ್ಟೇ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಈತನನ್ನು ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಹಳೆಯ ವೈಷಮ್ಯವೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಎದುರಾಳಿ ದಾವೂದ್ ಹಾಗೂ ಸಫ್ವಾನ್ ಗ್ಯಾಂಗ್‍ನವರ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಇತ್ತೀಚೆತೆ ಇಲಿಯಾಸ್ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಊಟ ಮಾಡುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು. ಕೊನೆಗೆ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಹತ್ಯೆಗೀಡಾಗಿರುವ ಇಲಿಯಾಸ್ ಈ ಹಿಂದೆ ಉಲ್ಲಾಳ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷನಾಗಿದ್ದನು.

Facebook Comments

Sri Raghav

Admin