ಮಂಗಳೂರಿನಲ್ಲಿ ದೇಶದ 2ನೇ ಅತಿ ದೊಡ್ಡ ಅಂತರ್ಗತ ತೈಲ ಸಂಗ್ರಹಾಗಾರಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Nalin-kumar

ಮಂಗಳೂರು, ಅ.12- ದೇಶದ 2ನೇ ಅತಿ ದೊಡ್ಡ ಅಂತರ್ಗತ ತೈಲ ಸಂಗ್ರಹಾಗಾರಕ್ಕೆ ಮಂಗಳೂರಿನಲ್ಲಿಂದು ಚಾಲನೆ ದೊರೆತಿದೆ. ಯುದ್ಧ ಮತ್ತು ತುರ್ತು ಪರಿಸ್ಥಿತಿ ವೇಳೆ ದೇಶದಲ್ಲಿ ಬಳಕೆ ಮಾಡಲು ದೇಶದಲ್ಲಿ ವಿಶಾಖಪಟ್ಟಣ, ಉಡುಪಿಯ ಪಾದೂರು ಮತ್ತು ಮಂಗಳೂರಿನ ತೈಲ ಸಂಗ್ರಹಾಗಾರಗಳಲ್ಲಿ ತೈಲ ಸಂಗ್ರಹಣೆ ಮಾಡಲಾಗುತ್ತದೆ.  ಅತಿ ದೊಡ್ಡ ತೈಲ ಸಂಗ್ರಹಾಗಾರವಾಗಿರುವ ಮಂಗಳೂರಿಗೆ ಇರಾನ್‍ನಿಂದ 0.26 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾತೈಲ ಸಂಗ್ರಹ ಮಾಡಲಾಗಿದೆ. ವಿಶಾಖಪಟ್ಟಣದ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹಣೆ ನಂತರ ಮಂಗಳೂರಿಗೆ ಕಚ್ಚಾತೈಲ ತಲುಪಿದೆ.  ದೇಶದ ಈ ಮೂರೂ ಘಟಕಗಳಲ್ಲಿ 15 ದಿನಗಳಿಗಾಗುವಷ್ಟು ತೈಲ ಸಂಗ್ರಹಿಸುವ ಸಾಮಥ್ರ್ಯ ಹೊಂದಲಾಗಿದೆ. ಈ  ಸಂಗ್ರಹಾಗಾರವನ್ನು ಸಂಸದ ನಳೀನ್ ಕುಮಾರ್ ಕಟೀಲ್ ಉದ್ಹಾಟಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin