ಮಂಗಳೂರಿನಿಂದ ಐಎಂ ಉಗ್ರರಿಗೆ ನೆರವು ನೀಡುತ್ತಿದ್ದ ಬೆಂಬಲಿಗರ ಆಸ್ತಿ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Terrorist--Arrested--01

ಮಂಗಳೂರು, ಅ.14-ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರಗಾಮಿ ಸಂಘಟನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳೂರಿನ ಪಂಜಿಮೊಗರಿನಲ್ಲಿ ಬೆಂಬಲಿಗನೊಬ್ಬನ 5 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.  ಇಲ್ಲಿನ ನಿವಾಸಿ ಧೀರಜ್ ಸಾಹು ಸೇರಿದಂತೆ ಹಲವರಿಗೆ ಸೇರಿದ 5 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಉಗ್ರರಿಗೆ ಆರ್ಥಿಕ ನೆರವು ಮತ್ತು ಪಾಕಿಸ್ತಾನಿ ಪ್ರಜೆಯೊಬ್ಬನ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಇದೇ ಆರೋಪದ ಅಡಿ ಇಡಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಉಗ್ರರ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದರೆಂಬ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳು ಅಯೆಷಾ ಬಾನು ಮತ್ತು ಜುಬೇರ್ ಹುಸೇನ್ ಅವರನ್ನು ಈಗಾಗಲೇ ಬಂಧಿಸಿದ್ದಾರೆ.  ಧೀರಜ್ ಸಾಹುವಿನ ಬ್ಯಾಂಕ್ ಖಾತೆಗೆ ಕಮಿಷನ್ ರೂಪದಲ್ಲಿ ದೇಶದ ವಿವಿಧ ಭಾಗಗಳಿಂದ ಬರುತ್ತಿದ್ದ ಹಣದಲ್ಲಿ ತನ್ನ ಪಾಲನ್ನು ಇಟ್ಟುಕೊಂಡು ಇಂಡಿಯನ್ ಮುಜಾಹಿದ್ಧಿನ್ ಸಂಘಟನೆಯ ಜೊತೆಗೆ ಒಡನಾಟ ಹೊಂದಿದ್ದ ಜುಬೇರ್ ಹುಸೇಜ್, ಆಯೆಷಾ ಬಾನು, ಮತ್ತು ರಾಜು ಖಾನ್ ಸೇರಿದಂತೆ ಹಲವರ ಖಾತೆಗೆ ಉಳಿದ ಹಣವನ್ನು ವರ್ಗಾಯಿಸುತ್ತಿದ್ದ ತನ್ನಲಾಗಿದೆ.

ಈ ನಾಲ್ವರೂ ಪಾಕಿಸ್ತಾನ ಪ್ರಜೆ ಖಾಲಿದ್ ಜೊತೆ ಸಂಪರ್ಕ ಹೊಂದಿದ್ದರು. ಆತನ ನಿರ್ದೇಶನದ ಮೇರೆಗೆ ಅವರು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಕಮಿಷನ್‍ಗಾಗಿ ಉಗ್ರರ ಜೊತೆ ನಂಟು ಇಟ್ಟುಕೊಂಡಿದ್ದರು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದರು. ಈ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin