ಮಂಗಳೂರು-ತಿರುವನಂತಪುರ ರೈಲಿನಲ್ಲಿ ಚಿತ್ರನಟಿಗೆ ಲೈಂಗಿಕ ಕಿರುಕುಳ

ಈ ಸುದ್ದಿಯನ್ನು ಶೇರ್ ಮಾಡಿ

Manushi--01

ತಿರುವನಂತಪುರಂ, ಫೆ.2- ಮಂಗಳೂರಿನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ಮಾವೇಲಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಮಲೆಯಾಳಂ ಚಿತ್ರನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಯನ್ನು ಬಂಧಿಸಲಾಗಿದೆ. ಮಾವೇಲಿ ಎಕ್ಸ್‍ಪ್ರೆಸ್‍ನ 2-ಟಿಯರ್ ಹವಾನಿಯಂತ್ರಿತ ಬೋಗಿಯಲ್ಲಿ 23 ವರ್ಷದ ನಟಿಗೆ ಈ ಕೆಟ್ಟ ಅನುಭವವಾಗಿದೆ. ಆರೋಪಿ ವಿರುದ್ಧ ತಿರುಗಿಬಿದ್ದ ನಟಿಯು ಆರೋಪಿಯ ಬಂಧನಕ್ಕೆ ನೆರವಾಗಿದ್ದಾರೆ.

ಕಣ್ಣೂರಿನಲ್ಲಿ ರೈಲು ಏರಿದ ನಟಿ ಮೇಲಿನ ಬರ್ತ್‍ನಲ್ಲಿ ನಿದ್ರಿಸುತ್ತಿದ್ದರು. ಮುಂಜಾನೆ 1.10ರಲ್ಲಿ ಆರೋಪಿಯೊಬ್ಬ ಅವರ ಮುಖದ ಮೇಲೆ ಕೈಯಾಡಿಸುತ್ತಿದ್ದ. ಗಾಬರಿಯಿಂದ ಎಚ್ಚರಗೊಂಡ ಅವರು ಕಾಮುಕನ ಕೈ ಬೆರಳನ್ನು ಜೋರಾಗಿ ತಿರುಚಿದರು. ಸಹಾಯಕ್ಕಾಗಿ ಕೂಗಿದರೂ ಸಹ ಪ್ರಯಾಣಿಕರು ಮುಂದೆ ಬರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.  ಇದೇ ಬೋಗಿಯಲ್ಲಿದ್ದ ಚಿತ್ರಕಥೆ ಬರೆಯುವ ಉನ್ನಿ ಮತ್ತು ಸಹ ಪ್ರಯಾಣಿಕ ರಂಜಿತ್ ನೆರವಿಗೆ ಬಂದರು. ನಂತರ ಈ ಬಗ್ಗೆ ರೈಲಿನ ಟಿಕೆಟ್ ಕಲೆಕ್ಟರ್‍ಗೆ(ಟಿಟಿ) ಸುದ್ದಿಮುಟ್ಟಿಸಿದರು. ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿಯು ಪರಾರಿಯಾಗದಂತೆ ನಟಿಯು ಆತನನ್ನು ಹಿಡಿದಿಟ್ಟುಕೊಂಡಿದ್ದರು. ತ್ರಿ ಶ್ಯೂರು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ದುಷ್ಕರ್ಮಿಯನ್ನು ಬಂಧಿಸಿದರು.

Facebook Comments

Sri Raghav

Admin