ಮಂಗಳೂರು-ಬೆಂಗಳೂರು ರೈಲಿಗೆ ‘ಗೊಮ್ಮಟೇಶ್ವರ ಎಕ್ಸ್ ಪ್ರೆಸ್’ ಎಂದು ನಾಮಕರಣ

ಈ ಸುದ್ದಿಯನ್ನು ಶೇರ್ ಮಾಡಿ

Hasan---01

ಬೆಂಗಳೂರು, ಮಾ.26-ಮಂಗಳೂರು-ಬೆಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲಾಯಿತು. ಹಾಸನ -ಬೆಂಗಳೂರು ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಂಡು ಮಾತನಾಡಿ, 21 ವರ್ಷಗಳಿಂದ ಈ ರೈಲನ್ನು ಈ ಮಾರ್ಗವಾಗಿ ತರಲು ಪ್ರಯತ್ನಪಟ್ಟಿದ್ದೆ. ಈಗ ಯಶಸ್ವಿಯಾಗಿದೆ. ಈ ರೈಲಿಗೆ ಹೇಮಾವತಿ, ಹಾಸನಾಂಬೆ ಅಥವಾ ಗೊಮ್ಮಟೇಶ್ವರ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.

ಈ ಕೂಡಲೇ ವೇದಿಕೆಯಲ್ಲಿದ್ದ ಕೇಂದ್ರ ರೈಲ್ವೆ ಸಚಿವರು ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲು ಒಪ್ಪಿಗೆ ಸೂಚಿಸಿದರು.  ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡುವುದು ಸೂಕ್ತ. ಯಶವಂತಪುರ-ಹಾಸನ ರೈಲಿಗೆ ಹೇಮಾವತಿ ಹೆಸರಿಡಬೇಕೆಂಬ ಬೇಡಿಕೆ ಇದೆ. ಅದನ್ನು ನಂತರ ನಿರ್ಧರಿಸೋಣ ಎಂದು ಸ್ಪಷ್ಟನೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin