ಮಂಗಳೂರು ಹುಡುಗಿಯರ ಪಿಂಕ್ ಕೆಫೆಗೆ ನಟಿ ತಾಪ್ಸಿ ಸಹಾಯ

ಈ ಸುದ್ದಿಯನ್ನು ಶೇರ್ ಮಾಡಿ

Taapsee Pannu

ಸೂಪರ್‍ಹಿಟ್ ಪಿಂಕ್ ಸಿನಿಮಾದಿಂದ ಪ್ರೇರಣೆ ಪಡೆದ ಮಂಗಳೂರಿನ ಆರು ಯುವತಿಯರು ಕೆಫೆಯೊಂದನ್ನು ಆರಂಭಿಸಲಿದ್ದಾರೆ. ಬಾಲಿವುಡ್‍ನ ಭರವಸೆಯ ತಾರೆ ತಾಪ್ಸಿ ಪನ್ನುಗೆ ಈ ವಿಷಯ ತಿಳಿದು ಸಂತಸಗೊಂಡಳು. ಅಲ್ಲದೇ ಈ ಹುಡುಗಿಯರ ನವೋದ್ಯಮಕ್ಕೆ ಪ್ರಾಯೋಜಕತ್ವ ನೀಡುವ ಉದಾರತೆಯನ್ನೂ ಪ್ರದರ್ಶಿಸಿದ್ದಾಳೆ. ಪಿಂಕ್ ಚಿತ್ರ ನೋಡಿದ ನಂತರ ಮಂಗಳೂರಿನ ಆರು ಸ್ನೇಹಿತರು ಈಟರಿ ಜಯಿಂಟ್ ಆರಂಭಿಸಲಿದ್ದಾರೆ, ಇದರಲ್ಲಿ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿದ್ದಾರೆ ಹಾಗೂ ಅದಕ್ಕೆ ಪಿಂಕ್ ಕೆಫೆ ಎಂಬ ಹೆಸರಿಡಲಿದ್ದಾರೆ ಎಂಬ ಸುದ್ದಿ ತಿಳಿದ ಪನ್ನು ಮಹಿಳಾ ಸಬಲೀಕರಣದ ಈ ಪ್ರಯತ್ನವನ್ನು ಪ್ರಶಂಸಿಸಿದ್ದಾಳೆ. ಪುರುಷರಿಗಿಂತ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಈ ಕೆಫೆ ಆರಂಭಿಸಲಿರುವ ಮಂಗಳೂರು ಹುಡುಗಿಯರಿಗೆ ನಾನು ನೆರವು ನೀಡಲು ಸಿದ್ಧ. ಇದಕ್ಕಾಗಿ ನಾನು ಪ್ರಾಯೋಜಕತ್ವ ನೀಡುತ್ತೇನೆ. ಅವರ ಈ ಯೋಜನೆ ಯಶಸ್ಸಾಗಲಿ ಎಂದು ನಟಿ ಹಾರೈಸಿದ್ದಾಳೆ. ಪ್ರೇಕ್ಷಕರು ಮತ್ತು ಮಾಧ್ಯಮದಿಂದ ಉತ್ತಮ ವಿಮರ್ಶೆ ಪಡೆದಿರುವ ಈ ಚಿತ್ರವನ್ನು ಸ್ವತಃ ರಾಷ್ಟ್ರಪತಿ ಡಾ. ಪ್ರಣವ್ ಮುಖರ್ಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭವನ ದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಸೇರಿದಂತೆ ಚಿತ್ರತಂಡದೊಂದಿಗೆ ಸಿನಿಮಾ ವೀಕ್ಷಿಸಿದ ರಾಷ್ಟ್ರಪತಿ ಮಹಿಳಾ ಸಬಲೀಕರಣ ಸಾರುವ ಒಂದು ಅತ್ಯುತ್ತಮ ಚಿತ್ರ ಎಂದು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin