ಮಂಜೇಗೌಡರ ಈ ರೋಬೋಟ್ ಸೈನಿಕರನ್ನು ಶತ್ರುಗಳ ದಾಳಿಯಿಂದ ಪಾರು ಮಾತುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Robot--01

ಕೆ.ಆರ್.ಪೇಟೆ, ಮೇ 29- ಪ್ರಾಣದ ಹಂಗು ತೊರೆದು ದೇಶ ಕಾಯುವ ಸೈನಿಕರನ್ನು ಶತ್ರುಗಳ ದಾಳಿಯಿಂದ ಪಾರು ಮಾಡಿ ಅಪಾಯಕಾರಿ ಜಾಗದಲ್ಲಿ ಸೈನಿಕರು ಮಾಡುವ ಕೆಲಸವನ್ನು ಮಾಡುವಂತಹ ರೋಬೋ ಯಂತ್ರವನ್ನು ಆವಿಷ್ಕಾರ ಮಾಡುವ ಮೂಲಕ ತಾಲೂಕಿನ ಕೋಮನಹಳ್ಳಿ ಗ್ರಾಮದ ರೋಬೋ ತಜ್ಞ ಮಂಜೇಗೌಡ ರೋಬೋವನ್ನು ಕೊಡುಗೆಯಾಗಿ ನೀಡಿದ್ದಾರೆ.  ಪಟ್ಟಣದ ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಾತ್ಯಕ್ಷತೆ ನಡೆಸಿ ರೋಬೋ ಸೈನಿಕನ ಅನುಕೂಲ ಹಾಗೂ ಶತ್ರು ಸೈನಿಕರ ಸಂಹಾರದ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ದೇಶದ ಗಡಿ ಕಾಯುತ್ತಿರುವ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ, ಹಲ್ಲೆ ಮಾಡುತ್ತಿರುವ ಶತ್ರು ರಾಷ್ಟ್ರದ ಸೈನಿಕರ ಚಲನ ವಲನಗಳನ್ನು ಪತ್ತೆಹಚ್ಚುವ ಹಾಗೂ ತೆರೆ-ಮರೆಯಲ್ಲಿಯೇ ನಿಂತು ದ್ವಂಸಗೊಳಿಸುವ ಶಕ್ತಿ ಹೊಂದಿರುವ ಹೊಸ ಯಂತ್ರ ರೋಬೋ ದೇಶದ ಗಡಿಯಲ್ಲಿ ನಮ್ಮ ಸೈನಿಕರ ಜೀವ ಉಳಿಸಿ ಶತ್ರುಗಳ ಸದೆಬಡಿಯಲು ಅನುಕೂಲವಾಗಲಿದೆ. ಗಡಿಯಿಂದ ನಾಲ್ಕೈದು ಮೈಲಿಗಳು ದೂರದಲ್ಲಿ ಕಂಪ್ಯೂಟರ್ ಮೂಲಕ ಬಂದೂಕು ಹಿಡಿದಿರುವ ರೋಬೋ ಸೈನಿಕನಿಗೆ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದು ಅದು ಶತ್ರುಗಳ ಚಲನವಲನವನ್ನು ತಿಳಿಸಿಕೊಡುತ್ತದೆ.ಕಂಪ್ಯೂಟರ್ ಪರದೆಯಲ್ಲಿ ಶತ್ರುಗಳು ಕಂಡು ಬಂದರೆ ತಕ್ಷಣ ಶಸ್ತ್ರಸಜ್ಜಿತ ರೋಬೋ ಸೈನಿಕ ಶತ್ರು ಸೈನಿಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿ ಸುಲಭವಾಗಿ ನಾಶ ಪಡಿಸುತ್ತದೆ ಎಂದು ವಿವರಿಸಿದರು.  ಸೋಲಾರ್ ವಿದ್ಯುತ್ ಬಳಕೆ ಮಾಡಿಕೊಂಡು ರೋಬೋ ದುರ್ಗಮ ಸ್ಥಳದಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡಿ ಶತ್ರು ಸೈನಿಕರ ಸಮಗ್ರವಾದ ಮಾಹಿತಿಯನ್ನು ಭಾರತೀಯ ಸೈನಿಕರಿಗೆ ಒದಗಿಸುವ ಮೂಲಕ ನಮ್ಮ ಸೈನ್ಯದ ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ, ಸಾವು-ನೋವುಗಳನ್ನು ಸಂಪೂರ್ಣವಾಗಿ ತಡೆಯುತ್ತದೆ ಎಂದರು.

ಈ ರೋಬೋ ಯಂತ್ರವನ್ನು ಭಾರತೀಯ ಸೇನಾ ಪಡೆಗೆ ಅಳವಡಿಸುವ ಮೂಲಕ ಶತ್ರು ನಾಶದ ಜೊತೆಗೆ ನಮ್ಮ ಸೈನಿಕ ಅಮೂಲ್ಯ ಜೀವವನ್ನು ಉಳಿಸಲು ಬಳಕೆ ಮಾಡಿಕೊಳ್ಳಬೇಕೆಂದು ಮಂಜೇಗೌಡ ಮನವಿ ಮಾಡಿದರು.   ಕೊಳವೆ ಬಾವಿಗೆ ಬಿದ್ದ ಮಗುವನ್ನು ಮೇಲೆತ್ತುವ ರೋಬೋ ಯಂತ್ರ ತಯಾರಿಸಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದ ಇವರು ಇದೀಗ ಶತ್ರು ದಾಳಿಯನ್ನು ಹಿಮ್ಮೆಟ್ಟಿಸುವ ರೋಬೋ ತಯಾರಿಸಿದ್ದಾರೆ.

ಈ ಪ್ರಾತ್ಯಕ್ಷತೆಯನ್ನು ಶಾಸಕ ನಾರಾಯಣಗೌಡ, ಜಿಪಂ ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ಗ್ರಾಮ ಭಾರತಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕಿರಣ್‍ಕುಮಾರ್, ಸಾಮಾಜಿಕ ಹೋರಾಟಗಾರ ಕಿರಣ್‍ಕುಮಾರ್, ಹರಳಹಳ್ಳಿ ಗ್ರಾಪಂ ಅಧ್ಯಕ್ಷ ಕರ್ತೇನಹಳ್ಳಿ ಸುರೇಶ್, ಅಗ್ರಹಾರಬಾಚಹಳ್ಳಿ ಗ್ರಾಪಂ ಅಧ್ಯಕ್ಷ ರಮೇಶ್‍ಗೌಡ, ಪ್ರಗತಿಪರ ರೈತ ಕೆ.ಎಸ್.ಸೋಮಶೇಖರ್, ಸಮಾಜ ಸೇವಕ ರಾಜಾಹುಲಿ ದಿನೇಶ್, ಪುರಸಭೆಯ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ವೀಕ್ಷಿಸಿ ಅನ್ವೇಷಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರ ಶ್ಲಾಘನೆ: ಕೇವಲ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಮಂಜೇಗೌಡ ಅವರು ತಮ್ಮಲ್ಲಿ ಅವ್ಯಕ್ತವಾಗಿರುವ ತಾಂತ್ರಿಕ ಕೌಶಲ್ಯದಿಂದ ಸಂಶೋಧನೆ ಮಾಡಿ ಇಂತಹ ರೋಬೋ ನಿರ್ಮಿಸಿರುವುದು ಶ್ಲಾಘನೀಯ. ಇದಕ್ಕೂ ಮುನ್ನ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕೃಷಿ ಪರಿಕರಗಳನ್ನ್ನು ತಯಾರಿಸಿಕೊಟ್ಟು ತಾಲೂಕಿನ ಹೆಮ್ಮೆಯ ರೈತ ವಿಜ್ಞಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಶಾಸಕ ನಾರಾಯಣಗೌಡ ಹರ್ಷ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin