ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತ ಕೇಬಲ್ ಕುಮಾರನ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Murder-01

ಮಂಡ್ಯ ಡಿ.24 : ಜಾತ್ಯತೀತ ಜನತಾದಳ ಪಕ್ಷ(ಜೆಡಿಎಸ್)ದ ಕಾರ್ಯಕರ್ತ ಕೇಬಲ್ ಕುಮಾರ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.  ಮಳವಳ್ಳಿ ತಾಲೂಕಿನ ಜನಮನಹಳ್ಳಿ ಗ್ರಾಮದ ಕುಮಾರ್ ಅಲಿಯಾಸ್ ಕೇಬಲ್ ಕುಮಾರ ನನ್ನು ಕಳೆದ ರಾತ್ರಿ ಪಲ್ಸರ್ ಬೈಕ್ ನಲ್ಲಿ ಜನಮನಹಳ್ಳಿ ಗ್ರಾಮದಿಂದ ಹಲಗೂರಿಗೆ ಬರುತ್ತಿದ್ದ ವೇಳೆ ಆರ್‌ಎಕ್ಸ್ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ರಾಡ್ ನಿಂದ ದೇಹದ ವಿವಿಧೆಡೆ ಇರಿದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಜಾತ್ಯತೀತ ಪಕ್ಷದ ಕಾರ್ಯಕರ್ತನಾಗಿದ್ದ ಕುಮಾರ ಇತ್ತೀಚೆಗಷ್ಟೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin