ಮಂಡ್ಯದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಮ್ಯಾ

ಈ ಸುದ್ದಿಯನ್ನು ಶೇರ್ ಮಾಡಿ

Ramya

ಮಂಡ್ಯ, ನ.29- ಮಾಜಿ ಸಂಸದೆ ಹಾಗೂ ನಟಿ ರಮ್ಯ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಇಡೀ ದಿನ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಜತೆ ಬೆರೆತರು. ಬೆಳ್ಳಂ ಬೆಳಗ್ಗೆ ಗಣೇಶ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳಿಂದ ಉಡುಗೊರೆ, ಪುಷ್ಪಗುಚ್ಛಗಳನ್ನು ಸ್ವೀಕರಿಸಿ ಧನ್ಯವಾದ ಹೇಳಿದರು. ನಂತರ ಸೀದಾ ಹೊಟೇಲ್‍ಗೆ ತೆರಳಿ ತಿಂಡಿ ತಿಂದು ಅಲ್ಲಿದ್ದವರ ಜತೆಯೂ ಕೆಲ ಕಾಲ ಮಾತುಕತೆ ನಡೆಸಿದರು. ಕೆಲವರಿಗೆ ಅಲ್ಲಿಯೇ ಸಿಹಿ ನೀಡಿ ತಮ್ಮ ಹುಟ್ಟುಹಬ್ಬ ಸಂಭ್ರಮವನ್ನು ಇಮ್ಮಡಿ ಮಾಡಿಕೊಂಡರು.
ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಅಂಜನಾ, ರಾಜ್ಯ ಕಾರ್ಯದರ್ಶಿ ಶುಭದಾಯಿನಿ, ಕೆಆರ್‍ಡಿಎಲ್ ನಿರ್ದೇಶಕ ಶಶಿಕುಮಾರ್ ಜತೆಗಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin