ಮಂಡ್ಯದ ಗಂಡು ಅಂಬರೀಶ್’ಗೆ ಬಿಜೆಪಿ ಗಾಳ

ಈ ಸುದ್ದಿಯನ್ನು ಶೇರ್ ಮಾಡಿ

Ambarish-02

ಬೆಳಗಾವಿ, ನ.24- ಮಂಡ್ಯದ ಗಂಡು ಅಂಬಿಗೆ ಬಿಜೆಪಿ ಗಾಳ ಹಾಕಿದಂತಿದೆ. ಈ ಕುರಿತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಂಬಿ ಬಿಜೆಪಿಗೆ ಬರುವುದಾದರೆ ಮುಕ್ತವಾಗಿ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಅಂಬರೀಶ್ ಅವರ ಜತೆ ಉತ್ತಮ ಸ್ನೇಹವಿದೆ. ಮಾಧ್ಯಮಗಳಲ್ಲಿ ಈ ಸಂಬಂಧ ಸುದ್ದಿ ಬರುತ್ತಿದೆ. ಆದರೆ, ಅವರು ನನ್ನನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು. ಅಂಬರೀಶ್ ಅವರು ಮಂತ್ರಿಯಾಗಿದ್ದವರು. ಅವರು ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಂದ ರಾಜೀನಾಮೆ ಪಡೆಯುವ ವೇಳೆ ಅವರ ಜತೆ ಮಾತನಾಡಿಲ್ಲ ಎಂಬ ಬೇಸರ ಅವರಿಗಿದೆ ಎಂದರು.

ಸುಮಲತಾ ಅಂಬರೀಶ್ ಅವರು ಯಶವಂತಪುರದಲ್ಲಿ ಸ್ಪರ್ಧಿಸುವ ವಿಚಾರ ಸೇರಿದಂತೆ ಹಲವು ವಿಷಯಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಅಶೋಕ್ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin