ಮಂಡ್ಯ ಜನ ಮಾರಾಟಕ್ಕಿಲ್ಲ ಎಂಬುದನ್ನು ತೋರಿಸಿಕೊಡಬೇಕು : ಯಶ್

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಏ.15- ಮಂಡ್ಯದ ಜನ ಮಾರಾಟಕ್ಕಿಲ್ಲ ಎಂಬುದನ್ನು ಏ.18ರಂದು ನಡೆಯುವ ಚುನಾವಣೆಯಲ್ಲಿ ತೋರಿಸಿಕೊಡಬೇಕು. ಆ ಮೂಲಕ ಜನರ ಸ್ವಾಭಿಮಾನ ತೋರಿಸಿಕೊಡಬೇಕು ಎಂದು ಚಿತ್ರನಟ ಯಶ್ ಮತದಾರರಲ್ಲಿ ಮನವಿ ಮಾಡಿದರು.

ತಾಲೂಕಿನ ಬೀರುವಳ್ಳಿ, ಬಂಡಿಹೊಳೆ, ಮಂದಗೆರೆ, ಹರಿಹರಪುರ, ಮಡುವಿನಕೋಡಿ ಹಾಗೂ ಹೊಸಹೊಳಲು, ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ಅಂಬರೀಶಣ್ಣ ಅವರು ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಒಂದಲ್ಲ ಒಂದು ಅನುಧಾನ ನೀಡಿದ್ದಾರೆ. ಕೊಡುಗೆ ಇಲ್ಲದ ಗ್ರಾಮವೇ ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಶೇ.100ರಷ್ಟು ಅನುಧಾನ ಸದ್ಬಳಕೆ ಮಾಡಿ ಒಬ್ಬ ಸಂಸದ ಹೇಗೆ ಕೆಲಸ ಮಾಡಬೇಕು ಎಂದು ತೋರಿಸಿಕೊಟ್ಟ ಹೃದಯವಂತ ರಾಜಕಾರಣಿ ಅಂಬರೀಶ್ ಅವರ ಧರ್ಮಪತ್ನಿ ಸುಮಲತ ಅಂಬರೀಶ್ ಅವರನ್ನು ಗೆಲ್ಲಿಸುವ ಮೂಲಕ ಅಂಬರೀಶ್ ಅವರ ಹೆಸರನ್ನು ಚಿರಕಾಲ ಉಳಿಸಬೇಕು.

ಸುಮಲತಾ ಅವರ ಕ್ರಮ ಸಂಖ್ಯೆ 20ರ ಕಹಳೆ ಊದುತ್ತಿರುವ ರೈತನ ಗುರುತಿಗೆ ನೀಡಿ ಗೆಲ್ಲಿಸಿಕೊಡಬೇಕು ಎಂದು ಯಶ್ ಮನವಿ ಮಾಡಿದರು.
ತಾ. ಪಂ. ಸದಸ್ಯರಾದ ನಿಂಗೇಗೌಡ, ವಿನೂತಸುರೇಶ್, ಮುಖಂಡರಾದ ಕಟ್ಟೆಕ್ಯಾತನಹಳ್ಳಿ ಪಾಪೇಗೌಡ, ಕೆ.ಬಿ.ವಿವೇಕ್, ಎಸ್.ವಿ.ವಿನಯ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin