ಮಂಡ್ಯ ಜಿಲ್ಲೆಯಲ್ಲಿ ಉಲ್ಬಣಿಸುತ್ತಿರುವ ಡೇಂಘಿ, ಚಿಕೂನ್ಗುನ್ಯಾ, ಮಲೇರಿಯ
ಮಂಡ್ಯ, ಆ.27- ಜಿಲ್ಲೆಯಲ್ಲಿ ಡೇಂಘಿ, ಚಿಕೂನ್ಗುನ್ಯಾ, ಮಲೇರಿಯ ರೋಗಗಳು ಹೆಚ್ಚಾಗಿದ್ದು, ಚಿಕೂನ್ಗುನ್ಯ 12, ಡೇಂಘಿ 34 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಭವಾನಿ ಶಂಕರ್ ತಿಳಿಸಿದ್ದಾರೆ.ನಗರದಲ್ಲಿ ವಾರ್ತಾ ಇಲಾಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಯುಕ್ತಾಶ್ರಯದಲ್ಲಿ ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ನಿನ್ನೆ ನಡೆದ ಮಾಧ್ಯಮ ಸಂವಾದಲ್ಲಿ ರೋಗಗಳ ಬಗ್ಗೆ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜನರು ತಮ್ಮ ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಆಸುಪಾಸಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಸುಳ್ಳೆಗಳಿಂದ ಆದಷ್ಟು ದೂರವಿರುಬೇಕೆಂದು ಸಲಹೆ ನೀಡಿದರು.ಜಿಲ್ಲೆಯ ಇತರೆ ಇಲಾಖೆಯ ಸಹಯೋಗದಲ್ಲಿ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಆಶಾಕಾರ್ಯಕರ್ತರು ಹಾಗೂ ಖಾಸಗಿ ಆರೋಗ್ಯ ಸಂಘಗಳಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲೂ ಈಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಶಿಧರ್, ಬಸವರಾಜು, ಡಾ.ಮಾರುತಿ, ಸಹಯಾಕ ವಾರ್ತಾ ಅಧಿಕಾರಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+