ಮಂತ್ರಿಮಾಲ್‍ ಸೇಫ್, ಇನ್ನೆರಡು ದಿನಗಳಲ್ಲಿ ಮತ್ತೆ ಓಪನ್..!

ಈ ಸುದ್ದಿಯನ್ನು ಶೇರ್ ಮಾಡಿ

Mantri-Mall-2

ಬೆಂಗಳೂರು,ಜ.30-ನಾಲ್ಕನೇ ಮಹಡಿಯ ಗೋಡೆ ಕುಸಿದು ನಾಲ್ವರು ಸಿಬ್ಬಂದಿ ಗಾಯಗೊಂಡು ಆತಂಕ ಸೃಷ್ಟಿಸಿ ಮುಚ್ಚಿಹೋಗಿದ್ದ ಮಂತ್ರಿಮಾಲ್‍ನ್ನು ಇನ್ನೊಂದೆರಡು ದಿನಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ.   ಮಂತ್ರಿಮಾಲ್ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೃಢತೆ ಪ್ರಮಾಣ ಪತ್ರ ಸಿದ್ದವಾಗಿದ್ದು , ಗ್ರಾಹಕರು, ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ ಎಂದು ನಗರ ಯೋಜನೆ ಸಹಾಯಕ ನಿರ್ದೇಶಕ ಎನ್.ತಿಪ್ಪಣ್ಣ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದು , ಇನ್ನೆರಡು ಮೂರು ದಿನಗಳಲ್ಲಿ ಮಂತ್ರಿಮಾಲ್ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

ಎಂದಿನಂತೆ ಮಂತ್ರಿಮಾಲ್‍ನಲ್ಲಿ ವ್ಯಾಪಾರ ವಹಿವಾಟು, ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಥಿಯೇಟರ್‍ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಮಂತ್ರಿಮಾಲ್‍ನ ನಾಲ್ಕನೇ ಮಹಡಿಯ ಸಜ್ಜೆ ಕುಸಿದು ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. 4ನೇ ಮಹಡಿ ಮೇಲೆ ಓವರ್ ಲೋಡ್ ಆಗಿ ವಾಟರ್ ಟ್ಯಾಂಕ್ ಲೀಕಾಗಿ ಸಜ್ಜೆ ಕುಸಿದಿತ್ತು. ಇದರಿಂದ ಆತಂಕ ಉಂಟಾಗಿತ್ತು. ಮಂತ್ರಿಮಾಲ್‍ನವರು ಕೂಡ ಸಂಭಾವ್ಯ ಅನಾಹುತಗಳ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಘಟನೆ ನಡೆದ ತಕ್ಷಣ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಉಪಮೇಯರ್ ಆನಂದ್, ಬಿಬಿಎಂಪಿ ಸದಸ್ಯರು ಸ್ಥಳಕ್ಕೆ ಧಾವಿಸಿ ಕೂಡಲೇ ಮಂತ್ರಿಮಾಲ್‍ನ್ನು ಕ್ಲೋಸ್ ಮಾಡಿದ್ದರು. ‘

ನಗರ ಯೋಜನೆ ಸಹಾಯಕ ನಿರ್ದೇಶಕ ಎನ್.ತಿಪ್ಪಣ್ಣ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ತಂತ್ರಜ್ಞರ ಸಮಿತಿ ರಚಿಸಿ ಘಟನೆಗೆ ಕಾರಣ ತಿಳಿಯುವಂತೆ ಮತ್ತು ಕಟ್ಟಡದ ದೃಢತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದ್ದ ತಂಡ ಅಲ್ಲಿನ ಇಟ್ಟಿಗೆ, ಕಬ್ಬಿಣ ಎಲ್ಲವನ್ನು ಸ್ಯಾಂಪಲ್ ಪಡೆದು ಪರಿಶೀಲನೆಗೆ ಒಳಪಡಿಸಿದೆ. ಕಟ್ಟಡ ದೃಢತೆಯಿಂದ ಕೂಡಿರುವುದಾಗಿ ವರದಿ ನೀಡಿದೆ ಮತ್ತು ಶಿಥಿಲಗೊಂಡಿರುವ ಭಾಗವನ್ನು ದುರಸ್ತಿ ಮಾಡುವುದು ಮತ್ತು ಮುಂಜಾಗ್ರತಾ ಕ್ರಮ ವಹಿಸಲು, ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರವಹಿಸಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮದ ವಾಸನೆ:

ಮಂತ್ರಿಮಾಲ್ ದೃಢತೆ ಪ್ರಮಾಣ ಪತ್ರ ನೀಡಿರುವುದರ ಹಿಂದೆ ಭಾರೀ ಪ್ರಮಾಣದ ಅಕ್ರಮದ ವಾಸನೆ ಕಂಡುಬಂದಿದೆ. ಮಂತ್ರಿಮಾಲ್ ನಿರ್ಮಾಣ ಮಾಡುವಾಗಲೇ ಒತ್ತುವರಿ ಅಕ್ರಮ ಅವ್ಯವಹಾರ ಕೇಳಿಬಂದಿತ್ತು. ನಿರ್ಮಾಣದ ನಂತರವೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಕಟ್ಟಡ ಶಿಥಿಲಗೊಂಡು ಸಜ್ಜೆ ಕುಸಿದಿದ್ದರೂ ಅಧಿಕಾರಿಗಳು, ಕಟ್ಟಡ ತಂತ್ರಜ್ಞರು ದೃಢತೆ ಪ್ರಮಾಣಪತ್ರ ನೀಡಿದ್ದಾರೆ. ಇದರ ಹಿಂದೆ ಸಾಕಷ್ಟು ಅಕ್ರಮ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin