ಮಕ್ಕಳಮೇಲೆ ಲೈಂಗಿಕ ಕಿರುಕುಳ: ಸ್ವಾಮೀಜಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಜಾಫರ್,ಜು.10- ಇಲ್ಲಿನ ಆಶ್ರಮವೊಂದರ ಮಾಲೀಕರಾದ ಸ್ವಾಮಿಭಕ್ತಿ ಭೂಷಣ ಗೋವಿಂದ ಮಹಾರಾಜ್ ಅವರನ್ನು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧಿಸಲಾಗಿದೆ.

2008ರಿಂದಲೂ ಸುಕೇರ್ತಲ್‍ನಲ್ಲಿ ಆಶ್ರಮ ನಡೆಸುತ್ತಿರುವ ಸ್ವಾಮಿಭಕ್ತಿ ಭೂಷಣ ಗೋವಿಂದ ಮಹಾರಾಜ್ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿರುವುದಲ್ಲದೆ ಜೀತದಾಳುಗಳಾಗಿ ಕೆಲಸ ಮಾಡಲು ಸಹಾಯ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‍ನ ಅಮಿತ್‍ಕುಮಾರ್ ಅವರು ಮಕ್ಕಳ ವಿಚಾರಣೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ಕು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ.

ತ್ರಿಪುರ, ಮಿಜೋರಾಂ, ಅಸ್ಸಾಂನಿಂದ 7ರಿಂದ 10 ವರ್ಷ ವಯಸ್ಸಿನ ಮಕ್ಕಳನ್ನು ಕರೆತಂದು ಆಶ್ರಮದಲ್ಲಿ ಇರಿಸಿಕೊಳ್ಳಲಾಗಿತ್ತು. ಎಂಟು ಮಕ್ಕಳನ್ನು ರಕ್ಷಿಸಲಾಗಿದ್ದು, ಆಶ್ರಮದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಸ್ವಾಮಿಭಕ್ತಿ ಭೂಷಣನನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 323, 377, 504 ಮತ್ತು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Facebook Comments