ಮಕ್ಕಳಲ್ಲಿ ಕಲೆ, ಸಂಸ್ಕೃತಿ ಉಳಿಸಲು ರಾಜ್ಯಮಟ್ಟದ ಕಲಾ ಉತ್ಸವಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

14

ಬೆಳಗಾವಿ,ಫೆ.15- ಮಕ್ಕಳಲ್ಲಿ ಕಲೆ, ಸಂಸ್ಕೃತಿ ಉಳಿಸಲು ಹಾಗೂ ವಿವಿಧ ಜಿಲ್ಲೆಗಳ ಸಂಸ್ಸತಿಯನ್ನು ಪರಿಚಯಿಸುವ ಉದ್ದೇಶದಿಂದ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಾಲಭವನ ಸೊಸೈಟಿ ಅಧ್ಯಕ್ಷರಾದ ಡಾ. ಅಂಜಲಿತಾಯಿ ಹೆಚ್. ನಿಂಬಾಳ್ಕರ್ ಹೇಳಿದರು.ಅವರು ಸುವರ್ಣಸೌಧದಲ್ಲಿ ಬಾಲಭವನ ಸೊಸೈಟಿ ಹಾಗೂ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ, ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮೂರು ದಿನದ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ, ಅರಣ್ಯ ಪ್ರವಾಸ ಹಾಗೂ ವನ್ಯ ಜೀವಿದಾಮ ಭೀಮಗಡ ದರ್ಶನ ಹೀಗೆ ಅನೇಕ ಚಟುವಟಿಕೆ ಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ .ಆರ್ ಮಾತನಾಡಿ, ನಮ್ಮೊಳಗಿನ ಕೌಶಲ್ಯ ಹೊರ ಬರ ಬೇಕಾದರೆ ನಮ್ಮ ಭಾಗವಹಿಸುವಿಕೆ, ಪ್ರಾಯೋಗಿಕ ತರಬೇತಿ, ಆತ್ಮಸ್ಥೆರ್ಯ ಮತ್ತು ನಿಷ್ಠೆ, ನಂಬಿಕೆಗಳು ಗೆಲುವಿಗೆ ಮುಖ್ಯವಾಗಿದೆ ಎಂದು ಹೇಳಿದರು.ಕಲಾಶ್ರೀ ಪ್ರಶಸ್ತಿ ಕುರಿತು ತಿಸಲಾ ಅವರು ಮಾತನಾಡಿದರು. ಬಾಲ ಭವನದ ಸದಸ್ಯರಾದ ಮಲ್ಲಮ್ಮ, ಗೋಪಾಲ ನಾಯಕ ಹಾಗೂ ಬಾಲಶ್ರೀ ಪುರಸ್ಕಂತ ವಿಶಾಖಾ ಹೆಗಡೆ ಉಪಸ್ಥಿತರಿದ್ದರು

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin