ಮಕ್ಕಳಾಗದಿದ್ದಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Women

ಬೆಂಗಳೂರು, ಆ.22-ಮಕ್ಕಳಾಗದಿದ್ದರಿಂದ ಮನನೊಂದ ಗೃಹಿಣಿ ಅತಿಯಾದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಆರ್.ಕೆ.ಎಸ್ ನಗರದ 7ನೆ ಕ್ರಾಸ್, 7ನೇ ಮುಖ್ಯರಸ್ತೆ ನಿವಾಸಿ ವೇಲಾಂಗಿಣಿ ಅಲಿಯಾಸ್ ಜೀವಿತಾ (29) ಆತ್ಮಹತ್ಯೆಗೆ ಶರಣಾದ ಗೃಹಿಣಿ.  ಹನ್ನೊಂದು ವರ್ಷದ ಹಿಂದೆ ತನ್ನ ಸೋದರ ಮಾವ ವಿನೋದ್ಕುಮಾರ್ರನ್ನೇ ಜೀವಿತಾ ಮದುವೆಯಾಗಿದ್ದರು.  ವೃತ್ತಿಯಲ್ಲಿ ಆಟೋ ಚಾಲಕ, ಬಾರ್ಬೆಂಡರ್ ಆಗಿರುವ ವಿನೋದ್ಕುಮಾರ್ ದಂಪತಿಗೆ ಮಕ್ಕಳಿರಲಿಲ್ಲ. ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹೊಟ್ಟೆನೋವು ಹಾಗೂ ಮಕ್ಕಳಗಾದ ಕಾರಣ ಮನನೊಂದಿದ್ದ ಜೀವಿತಾ ನಿನ್ನೆ ಮನೆಯಲ್ಲಿ ಅತಿಯಾಗಿ ಮಾತ್ರೆ ಸೇವಿಸಿದ್ದಾರೆ.

ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವಿನೋದ್ಕುಮಾರ್ ಬೆಳಿಗ್ಗೆ 11.30ರಲ್ಲಿ ಮನೆಗೆ ಬಂದಾಗ ಪತ್ನಿ ಜೀವಿತಾ ಒದ್ದಾಡುತ್ತಿದ್ದುದನ್ನು ಕಂಡು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ನಂತರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಶ್ರೀರಾಮಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin