ಮಕ್ಕಳಿಗೆ ಒತ್ತಡ ಹಾಕದೆ ಸಮಾಜಮುಖಿ ವ್ಯಕ್ತಿಗಳನ್ನಾಗಿಸಿ

ಈ ಸುದ್ದಿಯನ್ನು ಶೇರ್ ಮಾಡಿ

turuvekere

ತುರುವೇಕೆರೆ,ಸೆ.19- ಪೂಷಕರು ಮಕ್ಕಳ ಮೇಲೆ ಅಂಕಗಳಿಸುವಂತೆ ಹೆಚ್ಚಿನ ಒತ್ತಡಗಳನ್ನು ಹಾಕುವ ಬದಲು ಅವರನ್ನು ಸಮಾಜಮುಖಿ ವ್ಯಕ್ತಿಗಳಾಗುವಂತೆ ಮಾಡ ಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ವೀರಶೈವ ಗುರುಕುಲಾನಂದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಹಾಗು ಅಭಿನಂಧನಾ ಸಮಾರಂಭದಲ್ಲಿ ಗುರುಸಿದ್ದರಾಮೇಶ್ವರರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಕೇವಲ ಎಂಜಿನಿಯರ್, ಡಾಕ್ಟರ್ ಇನ್ನಿತರ ಪದವಿಗಳನ್ನು ಗಳಿಸುವುದಕ್ಕಿಂತ ಐ.ಎ.ಎಸ್, ಐ.ಪಿಎಸ್, ಮತ್ತು ಕೆ.ಎ.ಎಸ್ ನಂತಹ ಪರೀಕ್ಷೆಗಳನ್ನು ಬರೆದು ಆಡಳಿತ ಕ್ಷೇತ್ರದಲ್ಲಿ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುವಂತಹ ಅಧಿಕಾರಿಗಳಾಗಲಿ. ಬಹುತೇಕ ಮಠಗಳು ಆಡಂಬರ, ಆರ್ಥಿಕ, ರಾಜಕೀಯ ಪ್ರಬಲ ಶಕ್ತಿ ಕೇಂದ್ರಗಳಾಗಿ ಮಾರ್ಪಟ್ಟು ಜ್ಞಾನ, ಆಧ್ಯಾತ್ಮಗಳಿಂದ ದೂರ ಉಳಿದಿವೆ. ಜೊತೆಗೆ ಜಾತಿ, ಧರ್ಮಗಳ ಕೂಪಮಂಡೂಕಗಳಾಗಿವೆ ಎಂದು ಮಾರ್ಮಿಕವಾಗಿ ನುಡಿದರು.
ನಿವೃತ್ತ ಆಯುಕ್ತ ಡಾ.ಸಿ.ಸೋಮಶೇಖರ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಶಿಕ್ಷಕರು ಮತ್ತು ಪೂಷಕರು ಸಚ್ಚಾರಿತ್ಯ, ಶೀಲ, ನಿಸೃಹತೆ, ಕಾರುಣ್ಯತಾ ಭಾವನೆಗಳನ್ನು ಬೆಳೆಸ ಬೇಕು ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಮಕ್ಕಳ ಮನಸ್ಸನ್ನು ಹದಗಿಳಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೆÇೀಷಕರು ಮಾಡ ಬೇಕಾಗಿದೆ. ಪ್ರತಿಯೊಬ್ಬ ಮಕ್ಕಳು ತಂದೆ ತಾಯಿಯರ ಸೇವೆ ಮಾಡುವ ಮೂಲಕ ದೇವರನ್ನು ಕಾಣ ಬೇಕೆಂದರು
ಜೆ.ಡಿ.ಎಸ್.ಮುಖಂಡ ಲೋಕೇಶ್ವರ್ ಮಾತನಾಡಿ ಲಿಂಗಾಯಿತ ಸಮುದಾಯದ ಸಂಘಗಳು ಹೆಚ್ಚು ಸಂಘಟನಾ ಶಕ್ತಿಯನ್ನು ಬೆಳೆಸಿಕೊಳ್ಳಲಿ. ಕೇವಲ ವಿದ್ಯಾರ್ಥಿಗಳಿಗೆ ಮತ್ತು ಲಿಂಗಾಯಿತಿ ಸಮುದಾಯದ ಮಕ್ಕಳಿಗೆ ಮಾತ್ರ ಪುರಸ್ಕಾರಗಳು ಸೀಮಿತವಾಗದೆ ಎಲ್ಲಾ ಜನಾಂಗದ ಮಕ್ಕಳಿಗೂ ಈ ಅವಕಾಶ ಸಿಗುವಂತಾಗಬೇಕು ಎಂದರು.
ಕೆರೆಗೋಡಿ ರಂಗಾಪುರದ ಪರಮಪೂಜ್ಯ ಗುರುಪರದೇಶಿ ಕೇಂದ್ರಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಂತರ ಪ್ರತಿಭಾವಂವ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ತಾಪಂ ಸದಸ್ಯರುಗಳಾದ ತೀರ್ಥಕುಮಾರಿ, ಹೇಮಾವತಿ ಶಿವಾನಂದ್, ಗ್ರಾ.ಪಂ ಅಧ್ಯಕ್ಷೆ ಸುಮ, ಲಿಂಗಾಯಿತ ಸಮುದಾಯದ ತಾಲ್ಲೂಕು ಅಧ್ಯಕ್ಷ ಕೆ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಪರಶಿವಮೂರ್ತಿ, ಖಜಾಂಚಿ ಬೇಲೂರಪ್ಪ, ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಶಿವಶಂಕರ್, ಮುಖಂಡರುಗಳಾದ ಡಿ.ಆರ್.ಬಸವರಾಜು, ರಾಯಸಂದ್ರ ರವಿಕುಮಾರ್, ಅರಳೀಕೆರೆ ರವಿ, ಜಿಲ್ಲಾ ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin