ಮಕ್ಕಳಿಗೆ ಮಾತೃಭಾಷೆ ಶಿಕ್ಷಣ ಬಹು ಮುಖ್ಯ

ಈ ಸುದ್ದಿಯನ್ನು ಶೇರ್ ಮಾಡಿ

12

ಬೆಳಗಾವಿ,ಫೆ.8– ಮಾತೃಭಾಷೆ ಶಿಕ್ಷಣ ಬಹು ಮುಖ್ಯ, ಜೊತೆಗೆ ತಂತ್ರಜ್ಞಾನದ ಅಳವಡಿಕೆ, ಸ್ವಪರಿಜ್ಞಾನ, ಪರಿಕಲ್ಪನೆ ಮಕ್ಕಳಲ್ಲಿ ಬೆಳೆಸಲು ಆರ್‍ಪಿಡಿ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಅರುಣಾ ಜೆ. ನಾಯಿಕ ಹೇಳಿದರು. ಧ್ರುವತಾರೆ ಸ್ಮರಣ ಸಂಚಿಕೆ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಸಂಸ್ಥೆಯು 1992ರಲ್ಲಿ ಸ್ಥಾಪಿಸಿದ ಗಡಿನಾಡಿನ ಮಾತೃಭಾಷೆಗಳಾದ ಕನ್ನಡ ಮತ್ತು ಮರಾಠಿ ಶಾಲೆಯು 25ರ ಸಂಭ್ರಮ ಅತ್ಯಂತ ಅದ್ದೂರಿಯಾಗಿ ಇತ್ತೀಚೆಗೆ ಜರುಗಿತು.ಅಂತಾರಾಷ್ಟ್ರೀಯ ಖ್ಯಾತ ಸಾಫ್ಟವೇರ ಉದ್ಯಮಿ, ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಗುರುರಾಜ ದೇಶಪಾಂಡೆ. ಅಮೇರಿಕಾ ಶ್ರೀಮಂತರು ಆಗಿರುವ ಬಿ.ಕೆ. ಮಾಡೆಲ್ ಮಾಜಿ ವಿದ್ಯಾರ್ಥಿ ಆಗಿದ್ದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ವೇದಿಕೆ ಮೇಲೆ ಅವಿನಾಶ ಪೋತದಾರ ಉಪಾಧ್ಯಕ್ಷರು ಶ್ರೀನಿವಾಸ ಶಿವಣಗಿ ಕಾರ್ಯದರ್ಶಿಗಳು ಜಯಶ್ರೀ ದೇಶಪಾಂಡೆ ಅವರುಗಳ ಉಪಸ್ಥಿತಿ ಮೆರಗು ತಂದಿತು. ಸಂಸ್ಥೆಯ ಹಿರಿಯರು, ಮುಖ್ಯ ಶಕ್ಷಕಿಯರು ಹಾಗೂ ಶಾಲೆ ಪ್ರಾರಂಭದಿಂದ ಸೇವೆ ಸಲ್ಲಿಸಿದ ರೀಕ್ಷ ಚಾಲಕರನ್ನು ಗೌರವಿಸಲಾಯಿತು.

ಮಾಜಿ ವಿದ್ಯಾರ್ಥಿಗಳ ಪ್ರಥಮ ಸಮಾವೇಶ ನಗರದ ಚಿರಪರಿಚಿತ ಸಿಎ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ ಅಧ್ಯಕ್ಷತೆಯಲ್ಲಿ ಜರುಗಿಸಲಾಯಿತು.  ಮುಖ್ಯ ಅತಿಥಿಗಳಾಗಿ ಡಾ. ರಘುರಾಜ ಕೆ. ರಾವ್, ಉಪಾಧ್ಯಕ್ಷರು ಅಕ್ವಾ-ಅಲೈನ್ಸ ಸಿನ್ನೊಳ್ಳಿ, ಡಾ. ಶಶಾಂಕ ಸಾಠೆ ನುರಿತ ವೈದ್ಯರು ಅವರು ಆಗಮಿಸಿ ಮಾಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಣ ಮಾಡಿದರು. 25ನೇ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಲೆ ಸಂಸ್ಥೆಯ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅವಿನಾಶ ಪೋತದಾರ ವಹಿಸಿ ಹುಮ್ಮಸ್ಸನ್ನು ತುಂಬಿದರು. ಕೃಷ್ಣಕುಮಾರ ಪೈ ಮತ್ತು ಶ್ರೀನಿವಾಸ ಶಿವಣಗಿ, ಜಿ.ಎನ್. ಜೋಶಿ ಅವರ ಉಪಸ್ಥಿತಿಯಲ್ಲಿ ಬೆಳ್ಳಿ ಹಬ್ಬ ಸಮಾರೋಪಗೊಂಡಿತು. ಮೂರುದಿನವೂ ನಾಡಗೀತೆ ಪ್ರಸ್ತುತಿ ಸುಮನ್ ಜೆ. ಜೋಶಿಯವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ಜರುಗಿತು. ಶಾಲೆಯ ಎಲ್ಲ ಸಿಬ್ಬಂದಿವರ್ಗ ಹುರುಪು-ಹುಮ್ಮಸ್ಸಿನಿಂದ ಕಾರ್ಯಕ್ರಮ ಯಶಸ್ಸಿಗೆ ಸಾಕ್ಷಿ ಆಯಿತು. ಸಾವಿರಾರು ಪಾಲಕರು, ನೂರಾರು ಮಾಜಿ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ದಾನಿಗಳು, ಆಮಂತ್ರಿತ ಗಣ್ಯರ ಉಪಸ್ಥಿತಿ ಪ್ರೋ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿನ ಹೆಮ್ಮೆ ಆಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin