ಮಕ್ಕಳಿಗೆ ಸೆರಲ್ಯಾಕ್ ತಿನಿಸೋ ಮೊದಲು ಈ ಸುದ್ದಿ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

Baby--01
ಮಾಗಡಿ,ಜ.31-ಗಂಟಲಲ್ಲಿ ಸೆರಲ್ಯಾಕ್ ಸಿಕ್ಕಿಕೊಂಡು ಮೂರು ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಹೊಸಪಾಳ್ಯದಲ್ಲಿ ಧನಲಕ್ಷ್ಮಿ ಮತ್ತು ಗೋವಿಂದರಾಜ್ ಎಂಬ ದಂಪತಿ ವಾಸವಾಗಿದ್ದು , ಧನಲಕ್ಷ್ಮಿ ತನ್ನ ಮಗುವಿಗೆ ಇಂದು ಬೆಳಗ್ಗೆ ಸೆರಲ್ಯಾಕ್ ತಿನಿಸಿದ್ದಾರೆ. ಈ ವೇಳೆ ಸೆರಲ್ಯಾಕ್ ಮಗುವಿನ ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಿದೆ.  ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆಯಾಗಿದೆ. ತಕ್ಷಣವೇ ದಂಪತಿ ಮಗುವನ್ನು ಸರ್ಕಾರಿಗೆ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಯೋಜನವಾಗದೆ ಮೃತಪಟ್ಟಿದೆ.   ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin