ಮಕ್ಕಳೊಂದಿಗೆ ಬಾಡಿ ಮಸಾಜ್ ಮಾಡಿಸಿಕೊಂಡ ಶಿಕ್ಷಕರ ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ


 

ಮಧ್ಯಪ್ರದೇಶ, ಆ.30-ಆಚಾರ್ಯ ದೇವೋ ಭವ. ಗುರುವನ್ನು ದೇವರಂತೆ ಕಾಣು ಎಂದು ನಮ್ಮ ಭವ್ಯ ಸಂಸ್ಕೃತಿಯಲ್ಲಿ ಸಾರಲಾಗಿದೆ.  ಆದರೆ, ಇಲ್ಲೊಬ್ಬ ದುರಂಹಕಾರಿ ಶಿಕ್ಷಕ ತನ್ನ ವಿದ್ಯಾರ್ಥಿಗಳಿಂದ ಅಂಗಮರ್ದನ (ಮಸಾಜ್) ಮಾಡಿಸಿಕೊಳ್ಳುವ ಮೂಲಕ ದೌಲತ್ತು ಪ್ರದರ್ಶಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.  ಛತ್ತೀಸ್ಗಢದ ಜಶ್ಪುರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕ ಅನೂಪ್ ಮಿಂಜ್ ಎಂಬಾತ ವಿದ್ಯಾರ್ಥಿಗಳಿಂದ ಅಂಗಮರ್ದನ ಮಾಡಿಸಿಕೊಳ್ಳುತ್ತಿರುವ ದೃಶ್ಯ ಈಗ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡಿ, ಈ ದೌಲತ್ತು ಮೇಷ್ಟ್ರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ವಿದ್ಯೆ ಕಲಿಯಲು ಶಾಲೆಗೆ ಹೋದ ತಮ್ಮ ಮಕ್ಕಳು ಶಿಕ್ಷಕನ ಮೈ-ಕೈ ಒತ್ತುವ ಕಾಯಕ ನೋಡಿ ಪೋಷಕರು ಕುಪಿತರಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ. ಈ ದೃಶ್ಯ ನೋಡಿ ಸ್ಥಳೀಯ ಆಡಳಿತ ತನಿಖೆಗೆ ಆದೇಶಿದೆ.

► Follow us on –  Facebook / Twitter  / Google+

Facebook Comments

Sri Raghav

Admin